HomePage_Banner
HomePage_Banner
HomePage_Banner
Breaking News

ವಿಧವೆ ಸೊಸೆಯ ಮರು ಮದುವೆ ಮಾಡಿಸಿದ ಅತ್ತೆ, ಕಳಂಜದಲ್ಲಿ ನಡೆದ ಅಪರೂಪದ ಘಟನೆ

 

 

ಮಗನ ಅಗಲಿಕೆಯಿಂದ ವಿಧವೆಯಾಗಿದ್ದ ಸೊಸೆಯ ಮರುಮದುವೆಯನ್ನು ಅತ್ತೆಯೇ ಮಾಡಿಸಿದ ಅಪರೂಪದ ಘಟನೆಯೊಂದು ಕಳಂಜದಲ್ಲಿ ನಡೆದಿದೆ.

ಕಳಂಜ ಗ್ರಾಮದ ಗೋಪಾಲಕಜೆಯ ದಿ. ಪದ್ಮಯ್ಯ ಎಂಬವರ ಪುತ್ರ ಮಾಧವ ಅವರ ವಿವಾಹ ಸುಶೀಲ ಎಂಬವರೊಂದಿಗೆ ನೆರವೇರಿತ್ತು. ಆದರೆ ಮಾಧವರವರು ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಈ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಸುಶೀಲ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗನ ಭವಿಷ್ಯಕ್ಕಾಗಿ ಮರು ಮದುವೆಯಾಗದಿರಲು ನಿರ್ಧರಿಸಿದ್ದರು.

ಆದರೆ ಸೊಸೆ ಜೀವನ ಹಾಳಾಗಬಾರದೆಂಬ ಕಾರಣಕ್ಕೆ ಆಕೆಯ ಮನವೊಲಿಸಿದ ಅತ್ತೆ ಕುಂಞಕ್ಕ, ಜಯಪ್ರಕಾಶ್ ಎಂಬವರೊಂದಿಗೆ ಸೊಸೆಯ ವಿವಾಹ ನೆರವೇರಿಸಿದ್ದಾರೆ. ಕೋಟೆ ದೇವಸ್ಥಾನದಲ್ಲಿ ಮದುವೆ ನೆರವೇರಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.