HomePage_Banner
HomePage_Banner

ಕಡಬ: ಅರುಣ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಶುಭಾರಂಭ

 

ಕಡಬ ತಾಲೂಕಿನ ಪ್ರಥಮ ವೃತ್ತಿನಿರತ ಚಾರ್ಟರ್ಡ್  ಅಕೌಂಟೆಂಟ್ಸ್ ಆಗಿರುವ ಅರುಣ್ ಕುಮಾರ್ ಅವರ ಮಾಲಕತ್ವದ ಅರುಣ್ ಅಸೋಸಿಯೇಟ್ಸ್ ಚಾರ್ಟರ್ ಅಕೌಂಟೆಂಟ್ ಸಂಸ್ಥೆಯು ಜು.15ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಸಿ. ಎ. ಗಣೇಶ್ ಭಟ್ ಪಿ ಸುಳ್ಯ ಅವರು ಉದ್ಘಾಟಿಸಿ, ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಎಂ. ವೆಂಕಟ್ರಮಣ ರಾವ್, ಕಡಬದ ಸಂತ ಜೋಕಿಮ್ಸ್ ಚರ್ಚ್ ನ ಧರ್ಮಗುರುಗಳಾದ ರೆ. ಫಾ. ರೊನಾಲ್ಡ್ ಲೋಬೊ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಜಿ.ಪಂ. ಸದಸ್ಯ ಪಿ. ಪಿ. ವರ್ಗೀಸ್, ಕಡಬ ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಎಂ. ಎಸ್. ಶಿವಗಣೇಶ್ ವಾಣಿಜ್ಯ ಸಂಕೀರ್ಣದ ಮಾಲಕ ತಿಮ್ಮಪ್ಪ ಗೌಡ ಭಾಗವಹಿಸಿ ಶುಭ ಹಾರೈಸಿದರು. ಸ್ವಸ್ತಿಕ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ
ಸಿ. ಎ. ಅರುಣ್ ರವರು ಸ್ವಾಗತಿಸಿದರು.ಅರುಣ್ ಕುಮಾರ್ ಅವರು ಜಾಲ್ಸೂರು ಗ್ರಾಮದ ಪಂಜಿಕಲ್ಲು ಉಮೇಶ್ ಭಟ್ ಅವರ ಸಹೋದರ ರಾಜಶೇಖರ ಭಟ್ ಅವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.