ಕಲ್ಮಡ್ಕ – ಕುಕ್ಕುಜಡ್ಕ- ದೊಡ್ಡತೋಟ ಮಾರ್ಗದಲ್ಲಿ ಬಸ್ ಆರಂಭದ ಮುನ್ಸೂಚನೆ ಶ್ರಮದಾನದ ಮೂಲಕ ರಸ್ತೆ ಬದಿ ಸ್ವಚ್ಛಗೊಳಿಸಲು ಗ್ರಾಮಸ್ಥರಲ್ಲಿ ಮನವಿ

Advt_Headding_Middle
Advt_Headding_Middle
Advt_Headding_Middle

ಕಲ್ಮಡ್ಕ – ಕುಕ್ಕುಜಡ್ಕ – ದೊಡ್ಡ ತೋಟ ರಸ್ತೆಯಲ್ಲಿ ಸರಕಾರಿ ಬಸ್ ಸಂಚಾರ ಆರಂಭವಾಗುವ ಮುನ್ಸೂಚನೆ ದೊರೆತಿದ್ದು, ಈ ಹಿನ್ನಲೆಯಲ್ಲಿ ರಸ್ತೆಯನ್ನು ಸುಗಮಗೊಳಿಸುವ ಕೆಲಸ ಮಾಡಬೇಕೆಂದು ಭಾಸ್ಕರ್ ಜೆ. ಮತ್ತು ಕಿರಣ್‌ ಕೊಂಡೆಬಾಯಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.

 

ನಾವು ಮಾಡ ಬೇಕಾಗಿರೊದು ಏನು ?

 ಸುಳ್ಯ ಬಸ್ ಡಿಪೋ ಮ್ಯಾನೇಜರ್ ಆಗಿರುವ ಸುಂದರ್ ರಾಜ್ ಅವರು ಬರುವ ವಾರದಲ್ಲಿ ಕೆಎಸಆರ್ಟಿಸಿ ಅಧಿಕಾರಿಗಳು ಕಲ್ಮಡ್ಕ ದಿಂದ ದೊಡ್ಡತೋಟದ ವರೆಗೆ ಸರ್ವೆ ನಡೆಸಲಿದ್ದಾರೆ. ಅವರು ಸರ್ವೆ ಮಾಡಲು ಆಗಮಿಸುವ ಮೊದಲು ಕಲ್ಮಡ್ಕ – ಕುಕ್ಕುಜಡ್ಕದ ವರೆಗಿನ ರಸ್ತೆಯನ್ನು ಶುಚಿಗೊಳಿಸಬೇಕಾಗಿದೆ. ಕಲ್ಮಡ್ಕ ದಿಂದ ಮುಂದೆ ಮತ್ತಿಗುಡ್ಡೆ, ಹಾಸನಡ್ಕ ಮುಂತಾದ ಕಡೆ ರಸ್ತೆ ಬದಿಯಲ್ಲಿ ಮರ ಗಿಡಗಳಿವೆ. ಇವುಗಳು ಬಸ್ ಮತ್ತು ಪ್ರಯಾಣಿಕರಿಗೆ ತೊಂದರೆ ಆಗುವ ಅವಕಾಶವಿರುತ್ತದೆ. ಆದ್ದರಿಂದ ಕಲ್ಮಡ್ಕ ಮತ್ತು ಕುಕ್ಕುಜಡ್ಕ ಗ್ರಾಮಸ್ಥರು ಸೇರಿ ಒಂದು ದಿನದ ಶ್ರಮದಾನ ( ಕೆಲಸ) ಮಾಡಿದರೆ ಸಹಾಯಕವಾಗಲಿದೆ. ಅಲ್ಲದೆ ಸರ್ವೆ ಮಾಡಲು ಬರುವ ಅಧಿಕಾರಿಗಳಿಗೆ ಪೂರಕವಾದ ರಿಪೋರ್ಟ್ ಕೊಡಲು ಸಹಾಯವಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಲ್ಮಡ್ಕ ದಿಂದ ಮತ್ತಿಕಟ್ಟೆಯ ರಸ್ತೆ ಬದಿ ಇರುವ ಕಾಡುಗಳನ್ನು ತಮ್ಮ ಕರ್ಚಿಲ್ಲಿ ತೆಗೆದುಕೊಡುತ್ತೇವೆ ಎಂದು ಶ್ರೀನಿವಾಸ ಜೆ.ಪಿ. ಜೋಗಿಬೆಟ್ಟು ಮತ್ತು ರಾಮ ನಾಯ್ಕ ಉಡುವೆಕೋಡಿ ತಿಳಿಸಿದ್ದಾರೆ. ಮತ್ತಿಕಟ್ಟೆಯಿಂದ ಕುಕ್ಕುಜಡ್ಕದವರೆಗೆ ಇರುವ ಕಾಡುಗಳನ್ನು ಊರವರು ಶುಚಿಗೊಳಿಸಲಿದ್ದಾರೆ ಮತ್ತು ಎಲ್ಲಾ ಗ್ರಾಮಸ್ಥರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.