HomePage_Banner
HomePage_Banner
HomePage_Banner
HomePage_Banner

ಅಧಿಕಾರಿಗಳ ಅನುಪಸ್ಥಿತಿ ವಿರೋಧಿಸಿ ಪಂಜ ಗ್ರಾಮಸಭೆ ರದ್ದು


ಪ್ರಮುಖ ಇಲಾಖೆಗಳ ಅಧಿಕಾರಿಗಳು ಗ್ರಾಮ ಸಭೆಗೆ ಬಾರದಿರುವುದನ್ನು ವಿರೋಧಿಸಿ ಗ್ರಾಮಸ್ಥರ ಆಗ್ರಹದ ಮೇರೆಗೆ ಇಂದಿನ ಪಂಜ ಗ್ರಾಮ ಸಭೆ ರದ್ದುಗೊಂಡಿದೆ.
ಪಂಜ ಗ್ರಾ.ಪಂ.ನ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳ ಗ್ರಾಮ ಸಭೆಯು ಇಂದು ಪಂಜದಲ್ಲಿ ಆಯೋಜನೆಗೊಂಡಿತ್ತು. ಈ ಗ್ರಾಮ ಸಭೆಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂ, ಪಶು ಸಂಗೋಪನೆ, ಪಿ.ಡಬ್ಲೂ.ಡಿ ಮೊದಲಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಬಾರದಿರುವುದನ್ನು ಗಮನಿಸಿದ ಗ್ರಾಮಸ್ಥರು ಅವರ ಅನುಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಆ ಇಲಾಖೆಗಳ ಅಧಿಕಾರಿಗಳು ಬಾರದೆ ಗ್ರಾಮಸಭೆ ನಡೆಸಬಾರದೆಂದು ಹೆಳಿದರು. ಆಗ ಗ್ರಾ.ಪಂ ಅಧ್ಯಕ್ಷ ಚಿದ್ಗಲ್ ಕಾರ್ಯಪ್ಪ ಗೌಡರು ಹಾಗೂ ನೋಡಲ್ ಅಧಿಕಾರಿಯವರು ಇಲಾಖಾಧಿಕಾರಿಗಳಿಗೆ ಪತ್ರ ಬರೆಯೋಣ ಎಂದು ಹೇಳಿದಾಗ, ಈ ಹಿಂದೆಯೂ ಪತ್ರ ಬರೆಯಲಾಗಿದೆ. ಫಲ ಸಿಕ್ಕಿಲ್ಲ. ಆದ್ದರಿಂದ ಗ್ರಾಮ ಸಭೆಯನ್ನೇ ಮುಂದೂಡಬೇಕು ಎಂದು ಜನರು ಆಗ್ರಹಿಸಿದರು. ಆ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ರದ್ದುಗೊಳಿಸಲಾಯಿತು. ಸಭೆಯಲ್ಲಿ ಸುಮಾರು 60-70 ಮಂದಿ ಊರವರು, ಒಬ್ಬರನ್ನು ಹೊರತುಪಡಿಸಿ ಎಲ್ಲಾ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.