HomePage_Banner
HomePage_Banner
HomePage_Banner
Breaking News

ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಮತ್ತು ಶ್ರಮದಾನ


ದೇವಚಳ್ಳ ಗ್ರಾ.ಪಂ, ಅರಣ್ಯ ಇಲಾಖೆ ಸುಳ್ಯ ವಲಯ, ಮೆಸ್ಕಾಂ ಗುತ್ತಿಗಾರು, ಇವುಗಳ ಸಹಕಾರದೊಂದಿಗೆ ಯುವ ಸೇವಾ ಮತ್ತು ಕ್ರೀಡಾ ಸಂಘ (ರಿ) ಮತ್ತು ಊರವರ ಸಹಕಾರದೊಂದಿಗೆ ವಾಲ್ತಾಜೆ ರಸ್ತೆ ದುರಸ್ತಿ ಕಾರ್ಯ ವಿದ್ಯುತ್ ಲೈನಿನ ಅನುಪಾಸುಗಳನ್ನು ಸ್ವಚ್ಚಗೊಳಿಸುವುದು ಮತ್ತು ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ, ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಶಿವಪ್ರಕಾಶ್ ಕಡಪಳ, ಸಿಬ್ಬಂದಿ ಚೇತನ್, ಉಪವಲಯ ಅರಣ್ಯಾಧಿಕಾರಿ ಎಂ.ಡಿ ರವೀಂದ್ರ, ಅರಣ್ಯ ರಕ್ಷಕ ಜಯಪ್ರಕಾಶ್ ಜಾಲುಮನೆ, ಸಿಬ್ಬಂದಿ ಸುರೇಂದ್ರ, ಮೆಸ್ಕಾಂ ವತಿಯಿಂದ ಶಿವರಾಮ ಮೊಟ್ಟೆ ಮತ್ತು ಸಿಬ್ಬಂದಿಗಳು, ಸಂಘದ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕಾರ್ಯದರ್ಶಿ ತುಳಸೀಕುಮಾರ್ ಕೊತ್ತ್ಯೆಡ್ಕ, ಗೌರವಾಧ್ಯಕ್ಷ ಪುರುಷೋತ್ತಮ ಕೊರಂಬಡ್ಕ, ಪದ್ಮ ಮಿನಾಜೆ, ದಾಮೋದರ ಮಿನಾಜೆ, ತಿರುಮಲೇಶ್ವರ ಮುಂಡೋಡಿ, ಮೋಹನ ಮಾಡಬಾಕಿಲು, ಶೇಷಪ್ಪ ಕೊರಂಬಡ್ಕ, ಗುಡ್ಡಪ್ಪ ಗೌಡ ಪಿಲಿಂಜ, ಕುಸುಮಾಧರ ಕೊಂಬೊಟ್ಟು, ಚಂದ್ರಶೇಖರ ಚಿದ್ಗಲ್, ನವೀನ್ ಕಾಯರ, ರೇವಂತ್ ಹೆಡ್ಡನಮನೆ, ರುತೇಶ್ ಬಲ್ಕಜೆ, ಚೆನ್ನಪ್ಪ ಕಾಯರ, ಪದ್ಮನಾಭ ಕಡ್ಲಾರ್, ಸುಬ್ಬಮ್ಮ ಗುಡ್ಡೆ, ರಂಜಿತ್ ಕಡ್ಲಾರ್, ಮನೋಜ್ ಗುಡ್ಡೆ, ಪ್ರಕಾಶ್ ಕೋಡಂಬು, ತೀರ್ಥ ಕೊಬೆಂಟ್ಟು, ರವೀಂದ್ರ ಕೋಡಂಬು, ಮೋನಪ್ಪ ಕೊಂಬೆಟ್ಟು, ಕೃಷ್ಣಕುಮಾರ್ ಪಿಲಿಂಜ, ಕೇಶವ ಕೊರಂಬಡ್ಕ, ವೇಣು ಚಿದ್ಗಲ್, ರಕ್ಷಿತ್ ಕಡ್ಲಾರ್, ತಿಲಕೇಶ್ ಮಿನಾಜೆ, ವಿನೋದ್ ಕಡ್ಲಾರ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಊರವರು ಭಾಗವಹಿಸಿದ್ದರು. ಮಧ್ಯಾಹ್ನದ ಊಟದ ವ್ಯವಸ್ಥೆಗೆ ಮಾಯಿಲಪ್ಪ ಗೌಡ ಮುಂಡೋಡಿ ಸಹಕಾರ ನೀಡಿದರು .ಊಟದ ವ್ಯವಸ್ಥೆ ಯನ್ನು ನಿತ್ಯಾನಂದ ಕೊರ್ತ್ಯಡ್ಕ ಅವರ ಮನೆಯಲ್ಲಿ ಮಾಡಿದರು. ಪ್ರವೀಣ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.