HomePage_Banner
HomePage_Banner
HomePage_Banner
Breaking News

ಮರ್ಕಂಜದ ಚೀಮಾಡು ವಿಕಲಚೇತನ ಬಾಲಕಿಯ ಕುಟುಂಬದ ಬಾಳಿಗೆ ಬೆಳಕಾದ ಯುವಬ್ರಿಗೇಡ್

ಎರಡೇ ದಿನದಲ್ಲಿ ಪಡಿತರ ಚೀಟಿ ವ್ಯವಸ್ಥೆ ಮಾಡಿದ ತಹಶೀಲ್ದಾರ್

ಮರ್ಕಂಜದ ಚೀಮಾಡು ಎಂಬಲ್ಲಿ ಪದ್ಮನಾಭರ ಪುತ್ರಿ ಮೇಘಶ್ರೀಯ ಸಂಕಷ್ಟದ ಬದುಕು ಮತ್ತು ಈ ಕುಟುಂಬಕ್ಕೆ ಪಡಿತರ ಚೀಟಿ ಇಲ್ಲದ ಹಿನ್ನಲೆಯಲ್ಲಿ ಜಾಗೃತಿ ಮೂಡಿಸಿದ್ದ ಯುವ ಬ್ರಿಗೇಡ್ ಈ ಕುಟುಂಬಕ್ಕೆ ಪಡಿತರ ಚೀಟಿ ವ್ಯವಸ್ಥೆ ಮಾಡಿಕೊಡಲು ಯಶಸ್ವಿಯಾಗಿದೆ. ಎರಡೇ ದಿನದಲ್ಲಿ ಸುಳ್ಯ ತಹಶೀಲ್ದಾರ್ ಕುಂಞಿ ಅಹಮದ್‌ರವರು ಪಡಿತರ ಚೀಟಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಮರ್ಕಂಜ ಗ್ರಾಮದ ಚೀಮಾಡು ಪದ್ಮನಾಭರ ಪುತ್ರಿ ಮೇಘಶ್ರೀ ವಿಕಲಚೇತನಳಾಗಿ ಸಂಕಷ್ಟದ ಬದುಕು ನಡೆಸುತ್ತಿದ್ದಳು. ಈ ಕುಟುಂಬಕ್ಕೆ ರೇಷನ್ ಕಾರ್ಡ್ ಕೂಡಾ ಇರಲಿಲ್ಲ. ಇತ್ತೀಚೆಗೆ ಈ ಮನೆಗೆ ಭೇಟಿ ನೀಡಿದ್ದ ಯುವ ಬ್ರಿಗೇಡ್ ಸದಸ್ಯರು ದಾನಿಗಳ ಸಹಾಯದೊಂದಿಗೆ ಸೋಲಾರ್ ಲೈಟ್ ಒದಗಿಸಿದ್ದರು. ಈ ಕುಟುಂಬದ ಸಂಕಷ್ಟದ ಬಗ್ಗೆ ಸುದ್ದಿ ಬಿಡುಗಡೆಯಲ್ಲಿ ವಿಸೆಷ ವರದಿ ಪ್ರಕಟಗೊಂಡಿತ್ತು.

ಈ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ವಿಕಲಚೇತನ ಮಗುವಿನ ಬಾಳಿಗೆ ಮಾಸಾಶನ ದೊರೆಯಲು ಅನುಕೂಲವಾಗುವಂತೆ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣ ಸ್ಪಂದಿಸಿ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ ತಹಶೀಲ್ದಾರ್  2 ದಿನಗಳಲ್ಲಿ ರೇಷನ್ ಕಾರ್ಡ್ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.
ತಹಶೀಲ್ದಾರ್ ಕುಂಞಿ ಅಹ್ಮದ್ ಮತ್ತು ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಯುವ ಬ್ರಿಗೇಡ್ ಅಭಿನಂದನೆ ಸಲ್ಲಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.