HomePage_Banner
HomePage_Banner

ಪಂಜ ಲಯನ್ಸ್ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಜಿಲ್ಲಾ ಪ್ರಶಸ್ತಿ

ಮಂಗಳೂರಿನಲ್ಲಿ ನಡೆದ ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಪಂಜ ಲಯನ್ಸ್ ಕ್ಲಬ್ ಗೆ ಹತ್ತು ವರ್ಷದ ಒಳಗಿನ ಕ್ಲಬ್ ಗಳ ವಿಭಾಗದಲ್ಲಿ ಎಂಟನೇ ಅತ್ಯುತ್ತಮ ಕ್ಲಬ್ ಅವಾರ್ಡ್ ಬಂದಿರುತ್ತದೆ.


ದ.ಕ., ಕೊಡಗು, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ ೩೧೭ಆ ಇದರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಮಂಗಳೂರಿನ ವಾಮಂಜೂರು ಚರ್ಚ್ ಹಾಲ್‌ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲ ದೇವದಾಸ ಭಂಡಾರಿಯವರು ಪಂಜ ಲಯನ್ಸ್ ಕ್ಲಬ್ ಗೆ ಜಿಲ್ಲಾ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ನೀಡಿದರು. ತುಕಾರಾಮ್ ಏನೆಕಲ್, ಮಹಾಬಲ ಕುಳ, ಸಚಿನ್ನ ಕಾಣಿಕೆಯವರಿಗೆ ಅತ್ಯುತ್ತಮ ಅಧ್ಯಕ್ಷ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಪ್ರಶಸ್ತಿ ನೀಡಿದರು. ಪ್ರಾಂತ್ಯ  VII ರ ಪ್ರಾಂತ್ಯಾಧ್ಯಕ್ಷ ಜಾಕೆ ಮಾಧವ ಗೌಡ ಮತ್ತು ಜಿಲ್ಲಾ ಚೆಯರ್ ಪರ್ಸನ್ ಗಳಾದ ನೇಮಿರಾಜ್ ಪಲ್ಲೋಡಿ ಡಾ. ಪ್ರಕಾಶ್ ಡಿಸೋಜಾ ಹಾಗೂ ಸುರೇಶ್ ಕುಮಾರ್ ನಡ್ಕ ಇವರಿಗೆ ಜಿಲ್ಲಾ ಪ್ರಶಸ್ತಿ ಬಂದಿರುತ್ತದೆ.
ಈ ಸಂದರ್ಭದಲ್ಲಿ ಪಂಜ ಲಯನ್ಸ್ ಕ್ಲಬ್ ನ ಸದಸ್ಯರಾದ ತುಕಾರಾಮ್ ಏನೆಕಲ್, ಬಾಲಕೃಷ್ಣಗೌಡ ಮೂಲೆಮನೆ, ನೇಮಿರಾಜ್ ಪಲ್ಲೋಡಿ, ಡಾ. ಪ್ರಕಾಶ್ ಡಿಸೋಜ, ಸುರೇಶ್ ಕುಮಾರ್ ನಡ್ಕ, ಶಶಿಧರ ಪಳಂಗಾಯ, ಕುಸುಮಾಧರ ಕೆಮ್ಮೂರು, ಸುಬ್ಬಪ್ಪ ಕಲ್ಲುಗುಂಡಿ, ಸುಂದರ ಗೌಡ ಆರೆಂಬಿ, ಪುರುಷೋತ್ತಮ ದಂಬೆಕೋಡಿ, ಕುಮಾರಸ್ವಾಮಿ ಕಿನ್ನಿಕುಮೇರಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.