HomePage_Banner
HomePage_Banner
HomePage_Banner
Breaking News

ಬೆಳ್ಳಾರೆ : ಹೃದ್ರೋಗ ತಪಾಸಣಾ ಶಿಬಿರ ಮತ್ತು ಸಲಹೆ

ಹಿತಾಯು ಕ್ಲಿನಿಕ್ ಮತ್ತು ಥೆರಪಿಸೆಂಟರ್ ಬೆಳ್ಳಾರೆ, ಟ್ರಿಕಾಗೋ, ಕೆ. ಎಂ. ಸಿ. ಆಸ್ಪತ್ರೆ ಮಂಗಳೂರು ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಹಭಾಗಿತ್ವದಲ್ಲಿ ಬೆಳ್ಳಾರೆಯ ಡಾ| ಶ್ರೇಯಸ್ ಭಾರದ್ವಾಜ್‌ರವರ ಹಿತಾಯು ಥೆರಪಿ ಸೆಂಟರ್‌ನಲ್ಲಿ 15 ದಿನಗಳ ಹೃದ್ರೋಗ ತಪಾಸಣಾ ಶಿಬಿರ ಮತ್ತು ಸಲಹೆಗಳ ಕಾರ್ಯಕ್ರಮವು ಪ್ರಾರಂಭಗೊಂಡಿತು.

ಇಂದಿನ ಒತ್ತಡದ ವಾತಾವರಣದಲ್ಲಿ ಹೃದಯ ಸಂಬಂಧಿ ಎದೆನೋವು, ರಕ್ತದೊತ್ತಡ, ಉಸಿರಾಟ ತೊಂದರೆ, ಹೆಚ್ಚು ಕೊಬ್ಬಿನಾಂಶ, ಅನಿಯಮಿತ ಹೃದಯ ಬಡಿತ ಮೊದಲಾದ ಲಕ್ಷಣಗಳು ಕಂಡು ಬರುತ್ತಿದ್ದು, ಇದರ ಶುಶ್ರೂಯೆ ಅತೀ ಅಗತ್ಯವಿರುತ್ತದೆ. ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಕಾಳಜಿ ಬಗ್ಗೆ ಕೆ.ಎಂ.ಸಿ. ಮಂಗಳೂರು ತ್ವರಿತಗತಿಯ ಇ.ಸಿ.ಜಿ. ಸೇವೆಯನ್ನು ಈ ಸೆಂಟರ್‌ನಲ್ಲಿ ತೆರೆದಿದ್ದು, ರೋಗಿಗಳಿಗೆ ಕೇವಲ 1೦ ನಿಮಿಷದಲ್ಲಿ ಕೆ.ಎಂ.ಸಿ.ಯ ತಜ್ಞ ವೈದ್ಯರಿಂದ ರಿಪೋರ್ಟ್ ನೀಡಿ ಸೂಕ್ತ ಸಲಹೆಯನ್ನು ನೀಡಲಿರುತ್ತಾರೆ. ಮುಂದಿನ ದಿನಗಳಲ್ಲಿ ಇ.ಸಿ.ಜಿ. ಸೇವೆಯು ದಿನದ ೨೪ ಗಂಟೆಯೂ ಸಾರ್ವಜನಿಕರಿಗೆ ಬೆಳ್ಳಾರೆಯ ಹಿತಾಯು ಕ್ಲಿನಿಕ್‌ನಲ್ಲಿ ಲಭ್ಯವಿರುತ್ತದೆ. ಈ ಪರಿಸರದ ಸಾರ್ವಜನಿಕರು ಸದ್ರಿ ಸೇವೆ ಹಾಗೂ ಮಣಿಪಾಲ್ ಆರೋಗ್ಯ ಕಾರ್ಡ್‌ನ ವ್ಯವಸ್ಥೆಯನ್ನು ಸದುಪಯೋಗ ಪಡಿಸುವಂತೆ ಕೆ.ಎಂ.ಸಿ. ಆಸ್ಪತ್ರೆಯ ಪಬ್ಲಿಕ್ ರಿಲೇಶನ್ ಆಫೀಸರ್ ಮನಮೋಹನ ಸಭೆಯಲ್ಲಿ ವಿವರಿಸಿದರು.


ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ ಅಧ್ಯಕ್ಷ ರೊ| ಬಿ. ನರಸಿಂಹ ಜೋಶಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರೋಟರಿಯ ಪೂರ್ವಾಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಜೋಶಿ ಹಾಗೂ ವಿನಯಕುಮಾರ್ ಕೆ., ಶ್ರೀ ಡೆಂಟಲ್ ಕ್ಲಿನಿಕ್‌ನ ಡಾ| ಅನಂತಕೃಷ್ಣ ಕೆದಿಲ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು. ಡಾ| ಶ್ರೇಯಸ್ ಭಾರದ್ವಾಜ್ ಆರೋಗ್ಯ ಪದ್ಧತಿಯ ಬಗ್ಗೆ ವಿವರ ನೀಡಿ, ವಂದನಾರ್ಪಣೆಗೈದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.