HomePage_Banner
HomePage_Banner
HomePage_Banner
Breaking News

ಬಾಳಿಲ: ಶ್ರೀ ಮಹಾವಿಷ್ಣು ಮಹಿಳಾ ಸಿಂಗಾರಿ ಮೇಳದ ರಂಗ ಪ್ರವೇಶ ಮತ್ತು ಸತ್ಯನಾರಾಯಣ ಪೂಜೆ

ಮುಪ್ಪೇರ್ಯ ಗ್ರಾಮದ ಬಾಳಿಲ ಶ್ರೀ ಮಹಾವಿಷ್ಣು ಮಹಿಳಾ ಸಿಂಗಾರಿ ಮೇಳದ ರಂಗ ಪ್ರವೇಶವು ಜುಲೈ 14ರಂದು ಕಾಂತೂರು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಮಹಿಳಾ ಸಿಂಗಾರಿ ಮೇಳದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಬಾಳಿಲರವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಜಾಹ್ನವಿ ಕಾಂಚೋಡುರವರು ಚೆಂಡೆ ಬಡಿಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಂಚೋಡು ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಭಟ್ ಕಾಂಚೋಡು, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಸಂಚಾಲಕ ಎನ್. ವೆಂಕಟ್ರಮಣ ಭಟ್ ತಂಡಕ್ಕೆ ಶುಭ ಹಾರೈಸಿದರು. ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿಯವರು ತಂಡದ ಕೆಲಸವನ್ನು ಶ್ಲಾಘಿಸಿದರು.


ಸಂಗೀತ ಮತ್ತು ರಂಗಭೂಮಿ ಕಲಾವಿದರಾದ ವಿದ್ವಾನ್ ಸಾಯಿನಾರಾಯಣ ಕಲ್ಮಡ್ಕ ಕಲಾವಿದರನ್ನು ಪ್ರೋತ್ಸಾಹಿಸಿ, ಕಲೆಯ ಬಗ್ಗೆ ವಿವರಿಸುತ್ತಾ, ತಂಡ ಇನ್ನೂ ಅಭ್ಯಾಸ ಮಾಡಬೇಕಾಗಿದೆ. ಉತ್ತಮ ತಂಡವಾಗಿ ಬೆಳೆಯಬೇಕಾದರೆ ನಿರಂತರ ಪ್ರಯತ್ನ ಅಗತ್ಯ ಎಂದರು.
ಚೆಂಡೆ ಕಲೆಯನ್ನು ಮೂರೂವರೆ ತಿಂಗಳು ಕಲಿಸಿ ರಂಗಪ್ರವೇಶಕ್ಕೆ ಅಣಿಗೊಳಿಸಿದ ಗುರು ಗುರುಗಳಾದ ಲೋಕೇಶ್ ಬೆಳ್ಳಿಗೆ, ಕರುಣಾಕರ ಮುಪ್ಪೇರ್ಯ, ರವಿ ಪ್ರಕಾಶ್ ಮುಪ್ಪೇರ್ಯ, ರಘುರಾಮ ಕೋಟೆಬನ, ರಮೇಶ್ ಮುಪ್ಪೇರ್ಯ, ಚಂದ್ರಹಾಸ್ ಮಣಿಯಾಣಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ಅನ್ವಿತಾ ಮತ್ತು ನಿಖಿತಾ ಪ್ರಾರ್ಥಿಸಿ, ಮಹಿಳಾ ತಂಡದ ಕೋಶಾಧಿಕಾರಿ ಶ್ರೀಮತಿ ರೂಪಾ ಸಾಯಿ ನಾರಾಯಣ ಸ್ವಾಗತಿಸಿದರು. ಮಹಿಳಾ ತಂಡದ ಕಾರ್ಯದರ್ಶಿ ಶ್ರೀಮತಿ ವನಿತಾ ಸಚಿತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಂಡದ ಸದಸ್ಯೆ ಕು. ಅಶ್ವಿನಿ ಜೋಗಿಬೆಟ್ಟು ಅನಿಸಿಕೆ ವ್ಯಕ್ತಪಡಿಸಿದರು. ಶ್ರೀಮತಿ ಲೀಲಾವತಿ ಅಲೆಕ್ಕಾಡಿ ವಂದಿಸಿದರು. ರಾಜೇಶ್ ಅಯ್ಯನ ಕಟ್ಟೆ, ಕು. ಅಶ್ವಿನಿ ಮತ್ತು ರಕ್ಷಾ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.