HomePage_Banner
HomePage_Banner
HomePage_Banner

ವಿಶ್ವ ಪರಿಸರ ದಿನದ ಚಿತ್ರಕಲಾ ಸ್ಪರ್ಧೆ :  ಅಭಿಜ್ಞಾ ಪಳಂಗಾಯರಿಗೆ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಿ ಟೈಮ್ಸ್ ಗ್ರೂಫ್, ವಿಜಯಕರ್ನಾಟಕ ಪತ್ರಿಕೆಯವರ ಸಹಯೋಗದಲ್ಲಿ ವಿಸ್ವಪರಿಸರದ ದಿನದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಅಭಿಜ್ಞಾ ಪಳಂಗಾಯ ಅತ್ಯುತ್ತಮ ಕಲಾಕೃತಿ ಪ್ರಶಸ್ತಿ ಪಡೆದಿರುತ್ತಾರೆ. ಮಂಗಳೂರಿನ ಟಿಎಂಎ ಪೈ ಕನ್ಸೆಶನ್ ಸೆಂಟರ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 3 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಆರಂಭಿಕ ಹಂತದಲ್ಲಿ ಸುಮಾರು 15,೦೦೦ ವಿದ್ಯಾರ್ಥಿಗಳು ಭಾಗವಹಿಸಿದ ಈ ಸ್ಪಧೆಯಲ್ಲಿ ಅಂತಿಮ ಸುತ್ತಿಗೆ 1೦೦೦ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದರು. ಅಭಿಜ್ಞಾ ಪಳಂಗಾಯ ಕಡಬದ ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಚಿತ್ರಕಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಉದಯೋನ್ಮುಖ ಚಿತ್ರಕಲಾವಿದನಾಗಿ ಮೂಡುತ್ತಿದ್ದಾರೆ. ಇವರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಪಂಜರವರು ಮಾರ್ಗದರ್ಶನ ನೀಡಿರುತ್ತಾರೆ. ಶಶಿಧರ ಪಳಂಗಾಯ ಹಾಗೂ ರಶ್ಮಿ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.