HomePage_Banner
HomePage_Banner
HomePage_Banner

ಸರಕಾರ ಅಸ್ಥಿರಗೊಂಡಿರುವ ಹಿನ್ನಲೆ : ಅಲ್ಲಲ್ಲಿ ಬಿಗು ಪೊಲೀಸ್ ಬಂದೋಬಸ್ತ್

ಶಾಸಕರುಗಳ ರಾಜೀನಾಮೆಯಿಂದ ಅಸ್ಥಿರಗೊಂಡಿರುವ ರಾಜ್ಯ ಸರಕಾರ ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ನಡೆಸುತ್ತಿದ್ದು, ಈ ಸಂದರ್ಭ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದೆಂಬ ಕಾರಣಕ್ಕಾಗಿ ರಾಜ್ಯದ ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದೆ.

ಅದರಂತೆ ದ.ಕ. ಜಿಲ್ಲೆಯಲ್ಲೂ ಬಂದೋಬಸ್ತ್ ಕಾರ್ಯ ನಡೆದಿದ್ದು, ಸುಳ್ಯ ತಾಲೂಕಿನ ಅಲ್ಲಲ್ಲಿ ಪೊಲೀಸ್ ಕಾವಲು ಕಂಡು ಬರುತ್ತಿದೆ. ಪಂಜ, ಬೆಳ್ಳಾರೆ, ಸುಬ್ರಹ್ಮಣ್ಯ, ಗುತ್ತಿಗಾರು, ಸಂಪಾಜೆ, ಜಾಲ್ಸೂರು ಮೊದಲಾದೆಡೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸರು ಬಂದೋಬಸ್ತ್ ನಿರತರಾಗಿದ್ದಾರೆ. ಸುಳ್ಯದಲ್ಲಿ ಕಾಂಗ್ರೆಸ್ ಕಚೇರಿ ಇರುವ ಬಸ್‌ನಿಲ್ದಾಣದ ಬಳಿ ಹಾಗೂ ಬಿಜೆಪಿ ಕಚೇರಿ ಇರುವ ಶ್ರೀಹರಿ ಕಾಂಪ್ಲೆಕ್ಸ್ ಬಳಿ ತಲಾ ನಾಲ್ವರು ಪೊಲೀಸರು ನಿನ್ನೆಯಿಂದ ಕಾವಲಿದ್ದಾರೆ.
ಬಿಜೆಪಿ ಕಚೇರಿ ಬಳಿ ಕಾದು ಕುಳಿತಿರುವ ಪೊಲೀಸರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.