HomePage_Banner
HomePage_Banner
HomePage_Banner

ಬಸ್ ಕಂಡಕ್ಟರ್ ಕೇಶವ ಗೌಡ ನಿಧನ


ಸುಳ್ಯ- ಧರ್ಮಸ್ಥಳ, ಸುಳ್ಯ – ಮಂಗಳೂರು ಮೊದಲಾದ ರೂಟ್‌ಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಇತ್ತೀಚೆಗೆ ಸುಬ್ರಹ್ಮಣ್ಯ & ಸುಳ್ಯದಲ್ಲಿ ನಿಯೋಜನೆ ನೆಲೆಯಲ್ಲಿ ಟಿ.ಸಿ. ಆಗಿ ಕೆಲಸ ನಿರ್ವಹಿಸುತ್ತಿದ್ದ ಹೆಚ್. ಕೇಶವ ಗೌಡರು ಅನಾರೋಗ್ಯದ ಕಾರಣದಿಂದ ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಪುತ್ತೂರು ತಾಲೂಕು ಈಶ್ವರಮಂಗಲದ ಸುಳ್ಯ ಪದವಿ ನವರಾದ ಇವರಿಗೆ 51 ವರ್ಷ ವಯಸ್ಸಾಗಿತ್ತು. ಸಕ್ಕರೆ ಕಾಯಿಲೆ ಹೆಚ್ಚಾದ ಕಾರಣ ತೀವ್ರ ಅಸ್ವಸ್ಥರಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.