HomePage_Banner
HomePage_Banner
HomePage_Banner
Breaking News

ಪೈಲಾರು: ಶೌರ್ಯ ಯುವತಿ ಮಂಡಲದ ಪದಾಧಿಕಾರಿಗಳ ಆಯ್ಕೆ

 

ಅಧ್ಯಕ್ಷೆ ಯಕ್ಷಿತಾ ಪಾರೆ, ಕಾರ್ಯದರ್ಶಿ ಜಯಶ್ರೀ ಕುಳ್ಳಂಪಾಡಿ, ಖಜಾಂಜಿ ಹಸ್ತವಿ ಮಡಪ್ಪಾಡಿ

ಪೈಲಾರು ಶೌರ್ಯ ಯುವತಿ ಮಂಡಲ ಇದರ ನೂತನ ಪದಾಧಿಕಾರಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಜುಲೈ 7 ರಂದು ಪೈಲಾರಿನ ಮಿತ್ರವೃಂದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಉಪಸ್ಥಿತಿಯನ್ನು ಹೊಂದಿದ್ದ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಗೌರವಾಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು ಇವರ ಸಮ್ಮುಖದಲ್ಲಿ ಯುವತಿ ಮಂಡಲದ ಅಧ್ಯಕ್ಷೆಯಾಗಿ ಯಕ್ಷಿತಾ ಪಾರೆ, ಕಾರ್ಯದರ್ಶಿಯಾಗಿ ಜಯಶ್ರೀ ಕುಳ್ಳಂಪಾಡಿ ಹಾಗೂ ಖಜಾಂಜಿಯಾಗಿ ಹಸ್ತವಿ ಮಡಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.


ಯುವತಿ ಮಂಡಲದ ಗೌರವಾಧ್ಯಕ್ಷೆಯಾಗಿ ಶ್ರೀಮತಿ ರಶ್ಮಿ ರಜನೀಕಾಂತ್ ಉಮ್ಮಡ್ಕ, ಉಪಾಧ್ಯಕ್ಷೆಯಾಗಿ ಚರಿಶ್ಮಾ ಕಡಪಳ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ, ಕ್ರೀಡಾಧಿಕಾರಿಗಳಾಗಿ ದಿಶಾ ಮಾಡಬಾಕಿಲು,ಹಾಗೂ ನಿರ್ದೇಶಕಿಯರುಗಳಾಗಿ ಭವ್ಯ ಕಿರಣ್ ನಾಯರ್ ಕಲ್ಲು, ದಿವ್ಯಾ ಮಡಪ್ಪಾಡಿ, ರಾಜೀವಿ ಗೋಳ್ಯಾಡಿ, ಭವಾನಿ ಮೋಂಟಡ್ಕ , ಕುಸುಮಾವತಿ ಕೊಡ್ತುಗುಳಿ, ಮನೋರಮಾ ಕಡಪಳ, ರಚನ ಮೋಂಟಡ್ಕ, ಶೋಭ ಕೊಡ್ತುಗುಳಿ, ಜ್ಯೋತಿ ಕಡಪಳ ಹಾಗೂ ಸುಶ್ಮಿತಾ ಕಡಪಳ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಕಾರ್ಯದರ್ಶಿಯಾದ ತೇಜಸ್ವಿ ಕಡಪಳ ಹಾಗೂ ಜೊತೆ ಕಾರ್ಯದರ್ಶಿಯಾದ ವಿಖ್ಯಾತ್ ಬಾರ್ಪಣೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ಮಿತಾ ಎಂ. ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಭವ್ಯ ನಾಯರ್ ಕಲ್ಲು ರವರು ಸ್ವಾಗತಿಸಿ, ಜಯಶ್ರೀ ಯವರು ವಂದಿಸಿದರು. ಚರಿಶ್ಮ ಕಡಪಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.