HomePage_Banner
HomePage_Banner
HomePage_Banner

ಪಂಜ ಲಯನ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ

ಪಂಜದ ಲಯನ್ಸ್ ಕ್ಲಬ್ ವತಿಯಿಂದ ಪಾಂಡಿಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆಯನ್ನು ಜುಲೈ 18 ರಂದು ಮಾಡಲಾಯಿತು.

ಶಾಲಾ ಎಸ್ ಡಿಎಂಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸುರೇಶ್ ಕುಮಾರ್ ನಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಧರ್ಮಾವತಿ, ನಾಗೇಶ್ ಕಿನ್ನಿಕುಮೇರಿ, ಕರುಣಾಕರ ಎಣ್ಣೆಮಜಲು ಹಾಗೂ ಎಸ್ ಡಿ ಎಂಸಿ ಉಪಾಧ್ಯಕ್ಷೆ ಉಪಸ್ಥಿತರಿದ್ದರು. ರೂ ಐದು ಸಾವಿರ ಮೌಲ್ಯದ ಪುಸ್ತಕಗಳನ್ನು ಶಾಲೆಯ ಅರುವತ್ತು ಆರು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪುಸ್ತಕಗಳನ್ನು ದಾನ ರೂಪದಲ್ಲಿ ನೀಡಿದ ನಾಗೇಶ್ ಕಿನ್ನಿಕುಮೇರಿ ಮತ್ತು ಕರುಣಾಕರ ಎಣ್ಣೆಮಜಲುರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

 

ಮಹಾಬಲ ಕುಳ, ಪುರುಷೋತ್ತಮ ದಂಬೆಕೋಡಿ, ಸಚಿನ್ನ ಕಾಣಿಕೆ ಅನುರಾಜ್ ಕಕ್ಯಾನ ಮತ್ತು ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕ ಯಶೋಧರ ಕಳಂಜ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಧರ್ಮಾವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.