HomePage_Banner
HomePage_Banner

ನಿಂತಿಕಲ್ಲು ಐಟಿಐ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ

ನಿಂತಿಕಲ್ಲು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19  ನೇ ಸಾಧನೆ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕೆ.ಎಸ್.ಜಿ. ಎಜ್ಯುಕೇಷನಲ್ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯರಾದ ಕುಮಾರಸ್ವಾಮಿ ಕೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲ ಗುರುಪ್ರಸಾದ್ ಟಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ನೇಮಕಾತಿ ಅಧಿಕಾರಿ ವಿವೇಕ್ ಆಳ್ವ ವಿದ್ಯಾರ್ಥಿಗಳ ಶೇ.೧೦೦ರ ನೇಮಕಾತಿಯ ಕುರಿತು ಮಾಹಿತಿ ನೀಡಿ ನೇಮಕಾತಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕೆ.ಎಸ್. ಜಿ. ಪಿಯುಸಿಯ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಮತ್ತು ಕೆ.ಎಸ್.ಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಉಮೇಶ್ ಗೌಡ ಎಚ್ ಶುಭ ಹಾರೈಸಿದರು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಗೌಡರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ತರಬೇತಿ ಅಧಿಕಾರಿ ಗೋವಿಂದ್ ಕುಮಾರ್ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ದಯಾನಂದ ಕೆ.ಎಸ್. ವಂದಿಸಿದರು. ಪ್ರಸನ್ನ ವೈಟಿ ಮತ್ತು ಕಿರಣ್ ಕೆ.ಟಿ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.