HomePage_Banner
HomePage_Banner
HomePage_Banner
Breaking News

ಬಿಜೆಪಿ ಸರ್ಕಾರದಲ್ಲಿ ಅಂಗಾರರಿಗೆ ಸಚಿವ ಸ್ಥಾನ ನಿಶ್ಚಿತ?

ರಾಜ್ಯದ ಸಮ್ಮಿಶ್ರ ಸರ್ಕಾರ ಪತತನಗೊಂಡಿದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿನ್ನಲೆಯಲ್ಲಿ ಹಿರಿಯ ಶಾಸಕರಾದ ಸುಳ್ಯದ ಎಸ್.ಅಂಗಾರರವರಿಗೆ ಮಂತ್ರಿ ಪದವಿ ಸಿಗುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.
ದ.ಕ., ಉಡುಪಿ ಜಿಲ್ಲೆಯ ಒಟ್ಟು 13ಕ್ಷೇತ್ರಗಳ ಪೈಕಿ, 12ಕಡೆ ಬಿಜೆಪಿ ಜಯ ಗಳಿಸಿದ್ದು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಹೊಸ ಸರ್ಕಾರದಲ್ಲಿ ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. 

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂಗಾರರು 6ನೇ ಬಾರಿ ಶಾಸಕರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆಯ ಮಧ್ಯೆಯೂ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುವಂತೆ ಮಾಡಿರುವ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎನ್ನುವ ಒತ್ತಾಯ ಬಿಜೆಪಿ ಮುಖಂಡರಿಂದ ಕೇಳಿಬಂದಿದೆ. ಜತೆಗೆ ಎಸ್.ಅಂಗಾರರವರು ಪರಿಶಿಷ್ಟ ಜಾತಿಗೆ ಸೇರಿದ್ದು ಆ ಸಮುದಾಯಕ್ಕೂ ಪ್ರಾಶಸ್ತ್ಯ ನೀಡಿದಂತಾಗಲಿದೆ. ಹಿರಿತನದ ಜೊತೆಗೆ ಜಾತಿವಾರು ಲೆಕ್ಕಚಾರದಲ್ಲೂ ಅಂಗಾರ ಅವರ ಕೈ ಮೇಲಾಗುವ ಸಾಧ್ಯತೆ ದಟ್ಟವಾಗಿದೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.