HomePage_Banner
HomePage_Banner
HomePage_Banner
Breaking News

ಕದಿಕಡ್ಕ: ಬಾರೀ ಮಳೆಗೆ ಉರುಳಿ ಬಿದ್ದ ಮರ ತಹಶೀಲ್ದಾರ್ ನೇತೃತ್ವದಲ್ಲಿ ಮರ ತೆರವು


ಜಾಲ್ಸೂರು ಗ್ರಾಮದ ಕದಿಕಡ್ಕ- ಕೋರೆಕ್ಕಾನ ರಸ್ತೆಯಲ್ಲಿ ಆ.8ರಂದು ಸುರಿದ ಬಾರೀ ಮಳೆಗೆ ಮರವೊಂದು ಬುಡಮೇಲಾಗಿ ಧರಿಗುರುಳಿದ, ಎರಡು ದಿನಗಳ ಬಳಿಕ ಆ.10ರಂದು ತಹಶೀಲ್ದಾರ್ ನೇತೃತ್ವದಲ್ಲಿ ಮರ ತೆರವುಗೊಳಿಸಿದ ಘಟನೆ ಸಂಭವಿಸಿದೆ.

ತಹಶೀಲ್ದಾರ್ ಕುಂಞಿ ಅಹಮ್ಮದ್ ಅವರು ಆ.10ರಂದು ಸಂಜೆ ಕನಕಮಜಲಿಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ, ಜಾಲ್ಸೂರಿನ ಕದಿಕಡ್ಕದಿಂದ ಕೋರೆಕ್ಕಾನಕ್ಕೆ ತೆರಳುವ ಸಂಪರ್ಕ ರಸ್ತೆಯ ಮೇಲೆ ಮರ ಬಿದ್ದು , ಅಲ್ಲಿ ಜನ ಸೇರಿರುವುದನ್ನು ಗಮನಿಸಿದ ಅವರು ಬಂದು ಮರ ತೆರವುಗೊಳಿಸುವಂತೆ ಮೆಸ್ಕಾಂ ಇಲಾಖೆ ಹಾಗೂ ಸುಳ್ಯದ ಗೃಹರಕ್ಷಕ ದಳದವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು. ತಕ್ಷಣ ಗೃಹ ರಕ್ಷಕ ದಳದ ಸಿಬ್ಬಂದಿಗಳು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸಿದರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.