HomePage_Banner
HomePage_Banner
HomePage_Banner
Breaking News

ಕುಯಿಂತೋಡು-ಬೈಲೆ ಶ್ರೀ ಉಳ್ಳಾಕುಲು ದೈವಸ್ಥಾನ ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯ

ಸಂಪಾಜೆ ಗ್ರಾಮದ ಕುಯಿಂತೋಡು-ಬೈಲೆ ಶ್ರೀ ಉಳ್ಳಾಕುಲು ದೈವಸ್ಥಾನವು ಜೀರ್ಣಾವಸ್ಥೆಯಲ್ಲಿರುವುದರಿಂದ ಇದನ್ನು ಜೀರ್ಣೋದ್ಧಾರ ಮಾಡಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾಡುವ ನಿಟ್ಟಿನಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದೆ.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸೀಮೆಗೆ ಒಳಪಟ್ಟ ಸಂಪಾಜೆ ಗ್ರಾಮದ ಬೈಲೆ ಶ್ರೀ ಮಲೆ ಉಳ್ಳಾಕುಲು ದೈವಸ್ಥಾನ ಹಾಗೂ ಕುಯಿಂತೋಡಿನಲ್ಲಿರುವ ಶ್ರೀ ಉಳ್ಳಾಕುಲು ದೈವಸ್ಥಾನವು ಬಲ್ಲಾಳ ಅರಸ ಕಾಲಘಟ್ಟದಲ್ಲಿ ಕುಯಿಂತೋಡು ತರವಾಡು ಮನೆಯವರ ಪೂರ್ವಜರಿಗೆ ಬಂದಿದ್ದು, ಅಂದಾಜು ಸುಮಾರು 300 ವರ್ಷಗಳ ಇತಿಹಾಸ ಇರುವುದಾಗಿ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದೆ. ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ದೈವಸ್ಥಾನವು ಊರು ಕಟ್ಟಿನ ದೈವಸಾನಿಧ್ಯಗಳಾಗಿದ್ದು, ಈ ಎರಡು ದೈವ ಸಾನಿಧ್ಯಗಳ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ದೈವಜ್ಞ ಶಶಿಕುಮಾರ್ ಪಂಡಿತ್ ಅವರ ನೇತೃತ್ವದಲ್ಲಿ ಅಷ್ಟಮಂಗಲ ಚಿಂತನೆ ನಡೆಸಿದಾಗ ಶ್ರೀ ಉಳ್ಳಾಕುಲು ಸಾನಿಧ್ಯ ವ್ಯಾಪ್ತಿಯು ಪೂರ್ವಕಾಲ ಘಟ್ಟದಲ್ಲಿ ದ.ಕ.ಸಂಪಾಜೆ ಮತ್ತು ಕೊಡಗು ಸಂಪಾಜೆ ವ್ಯಾಪ್ತಿಗೆ ಇದ್ದು ಈ ದೈವ ಸಾನಿಧ್ಯಗಳಿಗೆ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವರು, ದೈವಿ ಸಂಬಂಧಗಳಿದ್ದು ಇಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಇದರ ವ್ಯಾಪ್ತಿಯ ಎಲ್ಲಾ ಭಕ್ತಾಭಿಮಾನಿಗಳ ಸಹಕಾರವಿರುವುದಾಗಿ ಚಿಂತನೆಯಲ್ಲಿ ತಿಳಿದುಬಂದಿದೆ.


ಈ ಎರಡು ದೈವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ, ಮಲೆ ಉಳ್ಳಾಕುಲು ಬೈಲೆ ದೈವಸ್ಥಾನದ ಮೊಕ್ತೇಸರರಾಗಿ ಕೆ.ಪಿ.ಪ್ರಕಾಶ್, ಕಾರ್ಯದರ್ಶಿಯಾಗಿ ಜಯರಾಮ ಅಬೀರ, ಶ್ರೀ ಶಿರಾಡಿ ದೈವಸ್ಥಾನದ ಮೊಕ್ತೇಸರರಾಗಿ ಕೆ.ಸಿ.ನಾರಾಯಣ, ಕಾರ್ಯದರ್ಶಿಯಾಗಿ ದಾಮೋದರ, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.