HomePage_Banner
HomePage_Banner
HomePage_Banner
Breaking News

ಅಶಕ್ತ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ‘ಮನೆಭಾಗ್ಯ’

ತಹಶೀಲ್ದಾರ್ ನೇತೃತ್ವ-ಆ. 15 ರಂದು ಹಸ್ತಾಂತರಕ್ಕೆ ಸಂಕಲ್ಪ

ಸುಳ್ಯ ಯುವ ಬ್ರಿಗೇಡ್-ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಶ್ರಮಸೇವೆ


ಹಲವು ವರ್ಷದಿಂದ ರಸ್ತೆ ಬದಿಯಲ್ಲಿ ಗುಡಿಸಲಿನಲ್ಲಿ ವಾಸವಿದ್ದ ಕುಟುಂಬವೊಂದಕ್ಕೆ ಈ ಬಾರಿಯ ಮಳೆಗಾಲದಲ್ಲಿ ಮನೆಭಾಗ್ಯ ಒದಗಿ ಬಂದಿದ್ದು, ಈ ಮನೆ ನಿರ್ಮಾಣದ ನೇತೃತ್ವವನ್ನು ಸುಳ್ಯ ತಹಶೀಲ್ದಾರ್ ವಹಿಸಿಕೊಂಡಿದ್ದರೆ, ಹಲವು ಸಹೃದಯಿ ದಾನಿಗಳು ಕೈ ಜೋಡಿಸಿದ್ದಾರೆ. ಸುಳ್ಯದ ಯುವ ಬ್ರಿಗೇಡ್ ಸದಸ್ಯರು ಹಾಗೂ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದವರು ಶ್ರಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ.15ರೊಳಗೆ ಕೆಲಸ ಪೂರ್ತಿಗೊಳಿಸಿ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲು ಈಗಾಗಲೇ ನಿರ್ಧರಿಸಲಾಗಿದೆ.

ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲಿ ಹೈಸ್ಕೂಲ್ ಸಮೀಪ ರಸ್ತೆಯ ಬದಿಯಲ್ಲಿ ರಾಮಣ್ಣ -ಲಲಿತಾ ದಂಪತಿಗಳು ಹಲವು ವರ್ಷದಿಂದ ಸಣ್ಣ ಗುಡಿಸಲೊಂದನ್ನು ಮಾಡಿಕೊಂಡು ವಾಸವಾಗಿದ್ದರು. ಅವರಿಗೆ ಜಾಗ, ರೇಶನ್ ಕಾರ್ಡ್ ಸೇರಿದಂತೆ ಯಾವುದೇ ಸವಲತ್ತು ಇರಲಿಲ್ಲ. ಕಳೆದ ವಾರ ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭ ಆ ರಸ್ತೆಯಲ್ಲಿ ಫೀಲ್ಡ್ ಗಿಳಿದ ಅಜ್ಜಾವರ ಗ್ರಾಮಕರಣಿಕ ಶರತ್ ಹಾಗೂ ಉಗ್ರಾಣಿ ಶಿವಣ್ಣರು ಈ ಮನೆಗೆ ಭೇಟಿ ನೀಡಿದರು. ಮಳೆ ಬಂದು ಮನೆಯ ಒಳಗಡೆ ನೀರು ಹರಿಯುತ್ತಿದ್ದುದನ್ನು ಗಮನಿಸಿದ ಇವರು ತಕ್ಷಣ ಪಕ್ಕದಲ್ಲೇ ಇರುವ ಅಡ್ಪಂಗಾಯ ಶಾಲೆಗೆ ಹೋಗಿ ಅಲ್ಲಿಯ ಎಸ್‌ಡಿ.ಎಂ.ಸಿ. ಹಾಗೂ ಶಿಕ್ಷಕರನ್ನು ವಿನಂತಿಸಿ ಶಾಲೆಯ ರಂಗ ಮಂದಿರದಲ್ಲಿ ವಾಸವಿರಲು ಅವಕಾಶ ಮಾಡಿಸಿಕೊಟ್ಟರು. ಬಳಿಕ ಆ ಕುಟುಂಬವನ್ನು ಅಲ್ಲಿಂದ ಶಾಲೆಗೆ ಸ್ಥಳಾಂತರಿಸಲಾಯಿತು.

ಬಳಿಕ ಶರತ್ ರವರು ತಹಶೀಲ್ದಾರ್ ಕುಂಞಿ ಅಹಮ್ಮದ್‌ರಿಗೆ ಈ ವಿಷಯ ತಿಳಿಸಿದರು. ತಹಶೀಲ್ದಾರ್ ಕುಂಞಿ ಅಹಮ್ಮದ್‌ರವರು ಆ.೮ ರಂದು ಅಡ್ಪಂಗಾಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಆ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವ ಬಗ್ಗೆ ಸಂಕಲ್ಪ ಮಾಡಿದ ತಹಶೀಲ್ದಾರರು ಸುಳ್ಯದ ಯುವ ಬ್ರಿಗೇಡ್ ಹಾಗೂ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದ ಸದಸ್ಯರನ್ನು ಸಂಪರ್ಕಿಸಿ ಚರ್ಚಿಸಿದರಲ್ಲದೆ, ಅಶಕ್ತ ಕುಟುಂಬಕ್ಕೆ ಮನೆ ಕಟ್ಟಿಕೊಡಲು ದಾನಿಗಳನ್ನು ಎಲ್ಲರ ಸಲಹೆಯಂತೆ ಸಂಪರ್ಕಿಸಿದರು. ಅದರಂತೆ ಅಂದೇ ಆ ಗುಡಿಸಲನ್ನು ಪ್ರವಾಹ ರಕ್ಷಣಾ ತಂಡದ ಸದಸ್ಯರ ಜತೆ ಸೇರಿ ನೆಲಸಮ ಮಾಡಿ ಮನೆ ನಿರ್ಮಾಣ ಕಾರ್ಯಕ್ಕೆ ಧುಮುಕಿದರು.

ಸಹಕರಿಸಿದ ದಾನಿಗಳು : ತಹಶೀಲ್ದಾರ್ ಮತ್ತು ಗ್ರಾಮ ಕರಣಿಕರು ಅಜ್ಜಾವರ ಕಲ್ಲುಪಣೆಯಯವರನ್ನು ಸಂಪರ್ಕಿಸಿ ಸುಳ್ಯ ಜನತಾ ಹಮೀದ್‌ರಿಂದ ಮನೆಗೆ ಬೇಕಾದ ಶೀಟ್ ಕೊಡಲು, ನವೀನ್ ರೈ ಮತ್ತು ಇತರ ಕೆಂಪು ಕಲ್ಲು ವ್ಯಾಪಾರಸ್ಥರ ಮೂಲಕ ಕೆಂಪುಕಲ್ಲು, ಕೆಂಪು ಕಲ್ಲು ವ್ಯವಸ್ಥೆ ಮಾಡಿದರು. ಶ್ಯಾಮ್ ಇಂಜಿನಿಯರ್‌ರಿಂದ ಸಿಮೆಂಟ್, ಪಿ.ಆರ್. ಹಮೀದ್ ದಾರಂದಗಳು, ಮತ್ತು ಕಿಟಕಿಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ. ಡಾ| ಚಂದ್ರಶೇಖರ ದಾಮ್ಲೆ ೫ ಸಾವಿರ ರೂ ನಗದು ನೀಡಿದ್ದಾರೆ. ಅಜ್ಜಾವರ ಗ್ರಾಪಂ. ನಿಂದ ಶೌಚಾಲಯ ಕಟ್ಟಿಕೊಡುವ ವ್ಯವಸ್ಥೆ ಹಾಗೂ ಕೆಲಸದ ಉಸ್ತುವಾರಿಯನ್ನು ಗುತ್ತಿಗೆದಾರ ಗೋಪಾಲಕೃಷ್ಣ ಕರೋಡಿಯವರು ನೋಡಿಕೊಳ್ಳಲಿದ್ದಾರೆ.
ಯುವಬ್ರಿಗೇಡ್ – ವಿಖಾಯ ತಂಡ : ಗುಡಿಸಲು ನೆಲ ಸಮ ಸೇರಿದಂತೆ ಮನೆ ಕಟ್ಟಿ ಕೊಡುವಲ್ಲಿ ಸುಳ್ಯ ಯುವ ಬ್ರಿಗೇಡ್ ಹಾಗೂ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡ ಶ್ರಮ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಒಂದು ದಿನ ಯುವ ಬ್ರಿಗೇಡ್ ಸದಸ್ಯರು ಕೆಲಸ ಮಾಡಿದರೆ, ಮತ್ತೊಂದು ದಿನ ವಿಖಾಯ ತಂಡ ಶ್ರಮ ಸೇವೆ ನಡೆಸುತ್ತಿದೆ. ಯುವ ಬ್ರಿಗೇಡ್ ತಂಡದಲ್ಲಿ ಶರತ್, ವಿನೋದ್, ಪ್ರಸಾದ್, ಅಶೋಕ್, ದೇವಿಪ್ರಸಾದ್, ಮನೀಷ್, ಪ್ರಶಾಂತ್, ಅಶ್ವತ್, ಗೌತಮ್, ಯತೀಶ್, ಪ್ರಶಾಂತ್, ಮಧುಕಿರಣ್, ವಿನಯ್, ನವೀನ, ಪುನೀತ್, ರವಿ, ಚಿದಾನಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಖಾಯ ತಂಡದಲ್ಲಿ ಖಾದರ್ ನೆಲ್ಲಿಯಡ್ಕ, ಶರೀಫ್ ಸಿ.ಎ., ಇಲ್ಯಾಸ್ ತೋಟಂ, ಉಂಬುಚ್ಚ ಬಯಂಬು, ಖಾದರ್ ಸ್ವರ್ಣಂ, ಹಸೈಬಾರ್, ಸ್ವರ್ಣಂ, ಅಝೀರh, ಹನೀಫ್ ಕೊಳಂಬೆ, ಕೆ.ಎಚ್.ಅಬ್ದುಲ್, ರಝಾಕ್ ಮೊದಲಾದವರು ಶ್ರಮ ಸೇವೆಯಲ್ಲಿದ್ದರು.
ಆ.೧೫ರಂದು ಹಸ್ತಾಂತರ
ಸಮಸ್ಯೆಯ ಕುರಿತು ಗಮನಕ್ಕೆ ವಿ.ಎ.ಯವರು ತಂದ ಕೂಡಲೇ ಭೇಟಿ ನೀಡಿ ಪರಿಶೀಲಿಸಿzವೆ. ಅವರಿಗೆ ಮನೆ ಕಟ್ಟಿಕೊಡುವ ಬಗ್ಗೆ ಕೆಲವರನ್ನು ಸಂಪರ್ಕಿಸಿ ಸಹಕಾರ ಕೋರಿದಾಗ ಸಹಕಾರ ನೀಡಿದ್ದಾರೆ. ಯುವ ಬ್ರಿಗೇಡ್ ಹಾಗೂ ವಿಖಾಯ ತಂಡದ ಯುವಕರು ಶ್ರಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಆ.೧೫ರೊಳಗೆ ಕೆಲಸ ಪೂರ್ತಿಗೊಳಿಸಿ ಆ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡುತ್ತೇವೆ ಎಂದು ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ತಿಳಿಸಿದ್ದಾರೆ.
‘ಸುದ್ದಿ’ ವರದಿ ಮಾಡಿತ್ತು
ಈ ಕುಟುಂಬದ ವ್ಯಥೆಯ ಕುರಿತು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಆಹಾರ ನಿರೀಕ್ಷಕರು, ಗ್ರಾಮ ಪಂಚಾಯತ್‌ನವರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯವರು, ಯುವ ಬ್ರಿಗೇಡ್‌ನ ಯುವಕರು ಕೂಡಾ ತಹಶೀಲ್ದಾರ್‌ರ ಗಮನಕ್ಕೆ ಈ ವಿಚಾರದ ಬಗ್ಗೆ ಮನವಿ ಮಾಡಿಕೊಂಡಿದ್ದರು.
ಶಾಸಕರ ಭೇಟಿ: ರಾಮಣ್ಣ ನಾಕರಿಗೆ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ಮತ್ತು ಮಂಡೆಕೋಲಿನಲ್ಲಿ ಹಾನಿಗೊಳಗಾಗಿರುವ ಬಾಬುರವರ ಮನೆಗೆ ಆ.೧೧ ರಂದು ಶಾಸಕ ಅಂಗಾರರು ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.