HomePage_Banner
HomePage_Banner
HomePage_Banner
Breaking News

ಎಡಮಂಗಲ : ಶ್ರದ್ಧಾ ಕೇಂದ್ರದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ, ಆಟಿ ತಿಂಗಳ ಮಾಹಿತಿ ಕಾರ್ಯಾಗಾರ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಅವಳಿ ದೇವಳಗಳ ಪರಿಸರ ಸ್ವಚ್ಛತೆ ಮತ್ತು ಆಟಿ ತಿಂಗಳ ಮಾಹಿತಿ ಕಾರ್ಯಾಗಾರವು ಆಗಸ್ಟ್ 11ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಞಾನ ವಿಕಾಸ ಸದಸ್ಯರಿಂದ ನಡೆಯಿತು. ಜೇಸಿಐ ತರಬೇತುದಾರ ಸೋಮಶೇಖರ ನೇರಳ ರವರು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಸೀತಾರಾಮಯ್ಯ ನೂಚಿಲ, ದೇವಲದ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಡಮಂಗಲ ಎ ಒಕ್ಕೂಟ ಮತ್ತು ಬಿ ಒಕ್ಕೂಟದ ಸೇವಾ ಪ್ರತಿನಿಧಿಗಳು, ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಎಡಮಂಗಲ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಭಾರತಿ, ಪಂಜ ವಲಯ ಮೇಲ್ವಿಚಾರಕ ವಸಂತ ಎಲ್. ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.