HomePage_Banner
HomePage_Banner
HomePage_Banner
Breaking News

ಪೆರಾಜೆ: ಬಿಜೆಪಿ ಗ್ರಾಮ ಸಮಿತಿಯ ಮಾಸಿಕ ಸಭೆ

 

 


ಪೆರಾಜೆ ಬಿಜೆಪಿ ಗ್ರಾಮ ಸಮಿತಿಯ ಮಾಸಿಕ ಸಭೆಯು ಆ. 13ರಂದು ನಡೆಯಿತು. ಇತ್ತೀಚೆಗೆ ನಿಧನರಾದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ನೆರೆಯಿಂದ ಮೃತರಾದವರಿಗೆ ಹೊನ್ನಪ್ಪ ಅಮೆಚೂರ್ ರವರು ನುಡಿ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ತಾಲೂಕ್ ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ , ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ಗಳ ಅಂದಾಜು ಪಟ್ಟಿ ಮಾಡಿ , ಮಳೆಯಿಂದ ಹಾನಿ ಗೊಂಡ ರಸ್ತೆ ,ಇತರ ಕೆಲಸಗಳ ತುರ್ತು ರಿಪೇರಿ ಕಾರ್ಯ ದ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.


ವೇದಿಕೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಮೋನಪ್ಪ ಕುಂಬಳಚೇರಿ , ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣಿದರ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ವಿವಿಧ ಮೋರ್ಚಾಗಳ ಪದಾಧಿಕಾರಿ ಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ಸ್ವಾಗತಿಸಿ, ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.