HomePage_Banner
HomePage_Banner

ಆಲೆಟ್ಟಿ: ಶ್ರೀ ಕೃಷ್ಣ ಜನ್ಮಾಷ್ಠಮಿ

ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ಆ.23 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ನಡೆಯಿತು.
ಕಾರ್ಯಕ್ರಮವನ್ನು ನಾಗಪಟ್ಟಣ ಸದಾಶಿವ ದೇವಳದ ವ್ಯ.ಸ.ಅಧ್ಯಕ್ಷ ದಾಮೋದರ ನಾರ್ಕೋಡುರವರು ಉದ್ಘಾಟಿಸಿದರು.

ಪೂರ್ವಾಹ್ನ ನಿತ್ಯಪೂಜೆಯಾದ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಲಿರುವುದು. ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಲಿರುವುದು. ಅಷ್ಠಮಿಯ ಪ್ರಯುಕ್ತ ಬೆಳಗ್ಗೆ ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ, ಮಕ್ಕಳಿಗೆ ಮೊಸರು ಕುಡಿಕೆ, ಹಗ್ಗ ಜಗ್ಗಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ಅಪರಾಹ್ನ ಸಮಾರೋಪ ಸಮಾರಂಭದಲ್ಲಿ ದೇವಳದ ಪ್ರ. ಅರ್ಚಕರಾಗಿ ಸುಮಾರು 9 ವರ್ಷಗಳಿಂದ ಸೇವೆ ಸಲ್ಲಿಸಿದ ಸುಪ್ರೀಮ್ ಭಟ್ ರವರನ್ನು ಭಾರಧ್ವಾಜಾಶ್ರಮದ ಅದ್ಯಾಪಕರಾದ ವೆಂಕಟೇಶ ಶಾಸ್ತ್ರೀ ಯವರು ಸನ್ಮಾನಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.