HomePage_Banner
HomePage_Banner

ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನ

     ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನ

 

ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ನೇಮಕಾತಿ ಮಾಡುವ ಆದೇಶವನ್ನು ಹೊರಡಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04.09.2019 ಆಗಿರುತ್ತದೆ.  ಮಂಗಳೂರು ವಿಭಾಗದಲ್ಲಿ ಒಟ್ಟು 43 ಹುದ್ದೆಗಳು ಖಾಲಿ ಇದ್ದು ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ತುಂಬಲ್ಪಡುತ್ತದೆ. ಈ ಹುದ್ದೆಗಳ ವಿವರಗಳನ್ನು ಅನುಬಂಧ 1  ರಲ್ಲಿ ನೀಡಲಾಗಿದೆ.

 ಗ್ರಾಮೀಣ ಅಂಚೆ ಸೇವಕ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಮಾಹಿತಿ ಕೆಳಗಿನಂತಿದೆ.

ಶಾಖಾ ಅಂಚೆ ಪಾಲಕ (BPM) : ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಕೆಲವು ಪಟ್ಟಣ ಪ್ರದೇಶದಲ್ಲಿ ಶಾಖಾ ಅಂಚೆ ಕಚೇರಿಗಳಿದ್ದು ಶಾಖಾ ಅಂಚೆ ಪಾಲಕರು ಅದರ ಮುಖ್ಯಸ್ಥರಾಗಿರುತ್ತಾರೆ. ಶಾಖಾ ಅಂಚೆ ಪಾಲಕರು ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ನೀಡಲ್ಪಡುವ ಯೋಜನೆಗಳು ,ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಜೀವ ವಿಮೆ . ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ರಿಜಿಸ್ಟರ್/ಸ್ಪೀಡ್ ಪೋಸ್ಟ್ ಕಳುಹಿಸುವುದು, ಪತ್ರಗಳ ರವಾನೆ ಹೀಗೆ ವಿವಿಧ ಅಂಚೆ ಸೇವೆಗಳನ್ನು 4  ಅಥವ 5 ಗಂಟೆಗಳ ವರೆಗೆ ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಸಹಾಯಕ ಅಂಚೆಪಾಲಕ (ABPM) : ಅವರ ಮುಖ್ಯವಾದ ಉದ್ಯೋಗ ಬಟವಾಡೆಗೆ ಸಂಬಂಧಿಸಿದ್ದಾಗಿರುತ್ತದೆ. ರಿಜಿಸ್ಟರ್ಡ್ ಪತ್ರಗಳು/ಸ್ಪೀಡ್ ಪೋಸ್ಟ್ ಗಳು, ಮನಿ ಆರ್ಡರ್ ಗಳನ್ನು ಮನೆ ಮನೆಗೆ ಬಟವಾಡೆ ಮಾಡುವ ಜವಾಬ್ದಾರಿ ಇವರದ್ದಾಗಿರುತ್ತದೆ. ಜೊತೆಯಲ್ಲಿ ಹೊಸ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಮಾಡಿಸುವುದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಮನೆ ಮನೆಗಳಿಗೆ  ಬ್ಯಾಂಕಿಗ್ ಸೌಲಭ್ಯ ಹೀಗೆ ಹಲವಾರು ಜವಾಬ್ದಾರಿಗಳು ಇವರದ್ದಾಗಿರುತ್ತದೆ.

ಢಾಕ್ ಸೇವಕ್(DS) : ಈ ಹುದ್ದೆಯಲ್ಲಿ ಇವರು ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ. ಮತ್ತು ಆಯಾ ಅಂಚೆ ಕಚೇರಿಗಳಿಗಿರುವ ಉಪ ಅಂಚೆ ಪಾಲಕರಿಗೆ ಕಚೇರಿಯ ನಿರ್ವಹಣೆಯಲ್ಲಿ ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ ಸಹಕರಿಸುವ ಕೆಲಸವನ್ನು ಡಾಕ್ ಸೇವಕರು ಹೊಂದಿರುತ್ತಾರೆ.

ಭತ್ಯೆಗಳು : ಶಾಖಾ ಅಂಚೆ ಪಾಲಕರಲ್ಲಿ 4 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಮತ್ತು 5 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಎಂಬ ಎರಡು ವಿಧಗಳಿದ್ದು ನಾಲ್ಕು ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/– ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 14500/- ಭತ್ಯೆ ಮೂಲ ವೇತನ ಹಾಗೂ ತುಟ್ಟಿ ಭತ್ಯೆ,ಇತರೆ ವೇತನಗಳು ಲಭಿಸುತ್ತದೆ.

ಉಪ ಶಾಖಾ ಅಂಚೆ ಪಾಲಕರು ಹಾಗೂ ಢಾಕ್ ಸೇವಕ್ ಹುದ್ದೆಗಳಲ್ಲಿ 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 10000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಲಭಿಸುತ್ತದೆ.

01-07-2018 ರ ನಂತರ ಅಯ್ಕೆಗೊಂಡ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲಿ ಆಯಾ ವರ್ಗಕ್ಕೆ ಸಂಬಂಧಿಸಿದ 4 ಗಂಟೆ ಕೆಲಸದ ಅವಧಿಗೆ ನಿಗದಿಯಾದ ವೇತನ ಶ್ರೇಣಿಯೇ ಅನ್ವಯವಾಗುವುದು.

ವಯೋಮಿತಿ:ಈ ಹುದ್ದೆಗೆ ಅರ್ಜಿ ಸುವ ಅಭ್ಯರ್ಥಿಗಳು,05.08.2019 ಗೆ ಅನ್ವಯವಾಗುವ ಹಾಗೆ 18 ರಿಂದ 40  ವರ್ಷ ದ ವಯೋಮಿತಿಯೊಳಗಿರಬೇಕು.ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒ.ಬಿ.ಸಿ ಅಂದರೆ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗ ಅಂದರೆ EWS  ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ. ಇನ್ನು ವಿಕಲ ಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ. ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟ ವಿಕಲಚೇತನರಿಗೆ  ಒಟ್ಟು 13 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಶೈಕ್ಷಣಿಕಆರ್ಹತೆ: ಎಲ್ಲಾ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯ. ಗಣಿತ ಮತ್ತು ಇಂಗ್ಲೀಷಿನಲ್ಲಿ ಕನಿಷ್ಟ ತೇರ್ಗಡೆ ಅಂಕಗಳನ್ನು ಕೂಡ ಹೊಂದಿರಬೇಕು. ಮಾನ್ಯತೆ ಹೊಂದಿರುವ ಪ್ರೌಢ ಶಿಕ್ಷಣ ಮಂಡಳಿಯಿಂದ ನೀಡಲ್ಪಡುವ SSLC/10ನೇ ತರಗತಿ ಪ್ರಮಾಣ ಪತ್ರ ಹೊಂದಿರಬೇಕು. ಅಲ್ಲದೆ ಅಭ್ಯರ್ಥಿಯು ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಪ್ರತೀ ಹುದ್ದೆಗೂ ಅರ್ಜಿ ಸಲ್ಲಿಸುವವರು ಕನಿಷ್ಟ 6೦ ದಿನಗಳ ಕಡ್ಡಾಯ ಕಂಪ್ಯೂಟರ್ ತರಬೇತಿಯನ್ನು ಮಾನ್ಯತೆ ಹೊಂದಿದ ಸಂಸ್ಥೆಯ ಮೂಲಕ ಪಡೆದಿರಬೇಕು.

ವಸತಿ: ಹುದ್ದೆಗೆ ಆಯ್ಕೆಗೊಂಡಲ್ಲಿ ಶಾಖಾ ಅಂಚೆ ಪಾಲಕರು ಕನಿಷ್ಟ 10*10 ಅಳತೆಯ ಅಂದರೆ ಸುಮಾರು 100 ಚದರ ಅಡಿ ವಿಸ್ತೀರ್ಣ ಹೊಂದಿರುವ ಪ್ರಮುಖ ಜಾಗದಲ್ಲಿರುವ ಒಂದು ಕಟ್ಟಡವನ್ನು ಶಾಖಾ ಅಂಚೆ ಕಚೇರಿ ನಡೆಸಲು ಕೊಡುವ ಭಾದ್ಯತೆಯನ್ನು ಹೊಂದಿರುತ್ತಾರೆ. ಅಲ್ಲದೇ ಸದ್ರಿ ಗ್ರಾಮದಲ್ಲಿ ವಾಸ ಮಾಡಬೇಕು. ಮತ್ತು ಆ ಕಟ್ಟಡಕ್ಕೆ ವಿದ್ಯುಚ್ಚಕ್ತಿಯ ಪೂರೈಕೆ ಕೂಡ ಇರಬೇಕು. ಇತ್ತೀಚಿನ ದಿನಗಳಲ್ಲಿ ಶಾಖಾ ಅಂಚೆ ಕಚೇರಿಗಳಲ್ಲಿ ಇಲೆಕ್ಟ್ರಾನಿಕ್ ದರ್ಪಣ್ ಉಪಕರಣದ ಮೂಲಕ ತಂತ್ರಜಾನ ಆಧಾರಿತ ಸೇವೆಗಳನ್ನು ನೀಡುತ್ತಿರುವುದರಿಂದ ಆ ಊರಿನಲ್ಲಿ ಸದ್ರಿ ಅಂಚೆ ಪಾಲಕರು ನೀಡುವ ಕಟ್ಟಡದಲ್ಲಿ ಸರಿಯಾದ ರೀತಿಯ ನೆಟ್ ವರ್ಕ್ ಲಭ್ಯತೆಯು ಕೂಡ ಮುಖ್ಯ ಆಗಿರುತ್ತದೆ.

ಎಲ್ಲಾ ಹುದ್ದೆಗಳಿಗೂ ಕೂಡ ಸ್ವತಂತ್ರವಾಗಿ ಸೈಕಲ್ ಚಲಾಯಿಸುವ ಅಥವಾ ಮೋಟರ್ ಸೈಕಲ್ ಚಲಾಯಿಸುವ ಸಾಮರ್ಥ್ಯ ವನ್ನು ಹೊಂದಿರಬೇಕು.

 ಈ ಎಲ್ಲಾ ಹುದ್ದೆಗಳಲ್ಲೂ 4 ಅಥವಾ 5 ಗಂಟೆ ಮಾತ್ರ ಕೆಲಸ ಮಾಡುವ ಹುದ್ದೆಗಳಾಗಿದ್ದು ಇನ್ನುಳಿದ ಅವಧಿಗಳಲ್ಲಿ ಪ್ರತೀ ಅಭ್ಯರ್ಥಿಯೂ ಕೂಡ ತನ್ನ ಜೀವನ ನಿರ್ವಹಣೆಗ ಬೇಕಾದ ಬೇರೆ ಬದಲಿ ಆದಾಯದ ಮೂಲವನ್ನು ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ಶಾಖಾ ಅಂಚೆ ಪಾಲಕರಾಗಿದ್ದಾಲ್ಲಿ 25000/- ರೂಪಾಯಿಗಳ ಬಾಂಡ್, ಉಪ ಶಾಖಾ ಅಂಚೆ ಪಾಲಕ, ಢಾಕ್ ಸೇವಕರಾಗಿದ್ದಲ್ಲಿ 10000/- ರೂಗಳ ಬಾಂಡನ್ನು ಸಲ್ಲಿಸಬೇಕಾಗುತ್ತದೆ. ಈ ಬಾಂಡ್ ಗಳನ್ನು ಕನಿಷ್ಟ ನಿಗದಿತ ಪ್ರೀಮಿಯಂ ಅನ್ನು ಕಳಿಸುವ ಮೂಲಕ  ಸಹಕಾರಿ ಸೊಸೈಟಿಗಳಿಂದ ಪಡೆಯುವ ವ್ಯವಸ್ಥೆಯಿದೆ.

ಕಳೆದ ಬಾರಿ ನೇಮಕಾತಿ ಆದೇಶಕ್ಕೂ ಈ ಬಾರಿಯ ಆದೇಶಕ್ಕೂ ಇರುವ ವ್ಯತ್ಯಾಸವೇನೆಂದರೆ ಈ ಬಾರಿ ಕನ್ನಡವನ್ನು ಒಂದು ಭಾಷೆಯಾಗಿ 10 ನೇ ತರಗತಿಯಲ್ಲಿ ಕಡ್ಡಾಯ ಮಾಡಿರುವುದರಿಂದ ಎಲ್ಲಾ ಕನ್ನಡಿಗರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹಾಗೆ ಗಡಿ ನಾಡ ಕನ್ನಡಿಗರು ಕೂಡ ತಾವು ಒಂದುಭಾಷೆಯಾಗಿ ಕನ್ನಡವನ್ನು ಕಲಿತಿದ್ದಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. EWS  ಅಂದರೆ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ವಿಶೇಷವಾದ ಮೀಸಲಾತಿ ಸೌಲಭ್ಯಗಳು ಈ ವರ್ಷದಲ್ಲಿ ಜಾರಿಗೆ ಬಂದಿದ್ದು ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರದ ಸಂಬಂಧಿತ ಪ್ರಾಧಿಕಾರಗಳು ನೀಡುತ್ತವೆ. ಅದನ್ನು ಕೂಡ ಸದ್ರಿ ಅಭ್ಯರ್ಥಿಗಳು ಪಡೆದುಕೊಂಡು ಅದರ ಸ್ಕ್ಯಾನ್  ಮಾಡಿದ ಪ್ರತಿಯನ್ನು ಅರ್ಜಿ ಯ ಜೊತೆಗೆ ಸಲ್ಲಿಸಬೇಕಾಗುತ್ತದೆ.

ಅರ್ಜಿ ಶುಲ್ಕ:ಅರ್ಜಿ ಸಲ್ಲಿಸುವಾಗ ಯಾವುದೇ ಮೀಸಲಾತಿ ಇಲ್ಲದವರು(UR). ಹಿಂದುಳಿದ ವರ್ಗ (OBC) , ಆರ್ಥಿಕವಾಗಿ ಹಿಂದುಳಿದವರು (EWS)  ರೂಪಾಯಿ 100 ಅನ್ನು ಅರ್ಜಿ ಶುಲ್ಕವಾಗಿ ಸಲ್ಲಿಸಬೇಕಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮತ್ತು SC/ST ಹಾಗೂ PwD  ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ. ಪ್ರತಿಯೊಬ್ಬರೂ ಕೂಡ 20 ಸಂಖ್ಯೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರತಿ 5 ಹುದ್ದೆಗೆ ರೂ 100/- ಶುಲ್ಕ ಕಡ್ಡಾಯ.

ಅರ್ಜಿಯನ್ನು ಸಲ್ಲಿಸುವ ಮೊದಲು ಕಡ್ಡಾಯ ದಾಖಲೆಗಳಾದ SSLC ಅಂಕಪಟ್ಟಿ, ಭಾವಚಿತ್ರ, ಸಹಿ ಇವುಗಳನ್ನು ಸ್ಕ್ಯಾನಿಂಗ ಮಾಡಿ ಇಟ್ಟುಕೊಂಡು ಅದನ್ನು ನಿಗದಿತ ಹಂತದಲ್ಲಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಗಳು https://indiapost.gov.inಅಥವಾ http://appost.in/gdsonlineವೆಬ್ ಸೈಟ್ ನಲ್ಲೂ ಕೂಡ ಲಭ್ಯವಿದೆ. ಮಂಗಳೂರಿನಲ್ಲಿ ಸುಮಾರು 43  ಹುದ್ದೆಗಳಿರುವುದರಿಂದ ಹಾಗೂ ಆಯ್ಕೆಯು ಸಂಪೂರ್ಣವಾಗಿ ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕ ಇರುವುದರಿಂದ ಮತ್ತೆ ಇದಕ್ಕೆ ಯಾವುದೇ ತರಹದ ಸಂದರ್ಶನವು ಇಲ್ಲದೇ ಇರುವುದರಿಂದ ಇದೊಂದು ಎಲ್ಲಾ SSLC  ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಯೊಂದಿಗೆ ಕೆಲಸ ಮಾಡುವ ಒಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಇದನ್ನು ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.