Breaking News

‘ಸುದ್ದಿ’ ಕೃಷಿಕರ ಬಳಿಗೆ-ಫಲದ ಆಗ್ರೋ ರೀಸರ್ಚ್ ಫೌಂಡೇಶನ್ ದೇಶದ ಪ್ರತಿಷ್ಠಿತ ಸಾವಯವ ಕೃಷಿ ಸಂಸ್ಥೆ, ಇವರಿಂದ ಲೇಖನ ಮಾಲೆ-ಕೆಲವು ಔಷಧೀಯ, ಸಾವಯವ ಗಿಡ, ಬೆಳೆಗಳನ್ನು (ಮಾರುಕಟ್ಟೆಗೆ) ಒಣಗಿಸುವ ವಿಧಾನ

Advt_Headding_Middle

ಫಲದ ಆಗ್ರೋ ರೀಸರ್ಚ್ ಫೌಂಡೇಶನ್ ದೇಶದ ಪ್ರತಿಷ್ಠಿತ ಸಾವಯವ ಕೃಷಿ ಸಂಸ್ಥೆ. ಪುತ್ತೂರು ಮೂಲದ ಸಾವಯವ ಕೃಷಿ ತಜ್ಞ ಹಾಗೂ ಹಿರಿಯ ಉದ್ಯಮಿ ಸಿ.ಎಂ.ಎನ್.ಶಾಸ್ತ್ರಿ ಅವರು ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಸ್ಥೆ ಕಳೆದ 23ವರ್ಷಗಳಿಂದ ಸಾವಯವ ಕೃಷಿ, ಉತ್ಪಾದನೆ, ರಫ್ತು, ಸಾವಯವ ಕೃಷಿಕರಿಗೆ ಸಹಾಯ, ಸಾವಯವ ಉತ್ಪನ್ನಗಳ ಚಿಲ್ಲರೆ ಮಾರಾಟ ಸೇರಿದಂತೆ ‘ಫಲದ ಪ್ಯೂರ್ ಆಂಡ್ ಶ್ಯೂರ್’ ಹೆಸರಲ್ಲಿ ದೇಶ ಹಾಗೂ ಅಂರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ರೈತರನ್ನು ಸ್ವಾವಲಂಬಿ ರೈತರನ್ನಾಗಿ ರೂಪಿಸುವ, ಅರಿವು ಮೂಡಿಸುವ ಈ ಲೇಖನ ಮಾಲಿಕೆ ಸುದ್ದಿ ಬಿಡುಗಡೆ ಸಹಯೋಗದಲ್ಲಿ ಉಮೇಶ್ ಅಡಿಗ ತಾಂತ್ರಿಕ ನಿರ್ದೇಶಕರು ಫಲದ ಆಗ್ರೋ ರೀಸರ್ಚ್ ಫೌಂಡೇಶನ್ ಇವರಿಂದ ಆರಂಭಿಸಲಾಗಿದೆ.
ಸಾವಯವ ಕೃಷಿ ಯಾಕಾಗಿ?: ನಾವು ದುಡಿಯುವುದು ತಿನ್ನುವುದಕ್ಕಾಗಿ. ಆದರೆ ನಾವು ತಿನ್ನುತ್ತಿರುವುದಾದರೂ ಏನನ್ನು? ನಮ್ಮ ಆಹಾರ ವಿಷಮಯವಾಗಿದೆ. ರಾಸಾಯನಿಕಗಳಿಂದ ತುಂಬಿದ ಅಕ್ಕಿ, ಬೇಳೆ, ಹಣ್ಣು, ತರಕಾರಿಗಳು ನಮ್ಮ ದೇಹ ಸೇರುತ್ತಿವೆ. ಇಂತಹ ಆಹಾರಗಳ ರೂಪದಲ್ಲಿ ನಾವು ವರ್ಷಕ್ಕೆ ಮೂರರಿಂದ ನಾಲ್ಕು ಕಿಲೋಗ್ರಾಂನಷ್ಟು ರಾಸಾಯನಿಕಗಳನ್ನು ಸೇವಿಸುತ್ತಿದ್ದೇವೆ.
ಎಂಡೊಸಲ್ಫಾನ್ ಎಂತಹ ವಿಷ ಎಂಬುದು ನಮಗೆ ಗೊತ್ತಿದೆ. ಅಂತಹ ಹಲವಾರು ವಿಷಗಳನ್ನು ನಾವು ಕೃಷಿಯಲ್ಲಿ ಉಪಯೋಗಿಸುತ್ತಿದ್ದೇವೆ. ಅದರ ನೇರ ಸೇವನೆಯ ಪರಿಣಾಮವನ್ನು ನಾವು ನೋಡಿದ್ದೇವೆ. ನಾವು ಸ್ವಲ್ಪ ಸ್ವಲ್ಪವೇ ವಿಷವನ್ನು ನಮ್ಮ ಆಹಾರದೊಂದಿಗೆ ಸೇವಿಸುತ್ತಲೇ ಇದ್ದೇವೆ. ಸಾಯಲು ಕೇವಲ 100 ಮಿಲಿಲೇಟರ್ ವಿಷ ಸಾಕು. ನಾವು ಅಷ್ಟು ಪ್ರಮಾಣದ ವಿಷವನ್ನು ನೇರವಾಗಿ ಆಹಾರದಲ್ಲಿ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಬದುಕಿದ್ದೇವೆ. ಮಣ್ಣಿನಲ್ಲಿ ಸತ್ವವೇ ಇಲ್ಲ ಎಂದು ಹೇಳುತ್ತ ಇನ್ನಷ್ಟು ರಾಸಾಯನಿಕ ಗೊಬ್ಬರ ಸೇರಿಸಿದರೆ ನಮ್ಮ ಆರೋಗ್ಯವೂ ಬೇಗ ಹಾಳಾಗುವುದು ನಿಶ್ವಿತ.
ಜನರ ಆಹಾರ ವಿಷಮುಕ್ತವಾಗಿರಬೇಕು ಎಂಬ ಕಲ್ಪನೆಯಲ್ಲಿ ಮೂಡಿ ಬಂದಿರುವ ಕೃಷಿ ಪದ್ಧತಿಯೇ ಸಾವಯವ ಕೃಷಿ. ವಿಶೇಷವೆಂದರೆ ಈ ಪದ್ಧತಿಯ ಉಗಮ ಸ್ಥಾನ ಭಾರತ. ಇದೀಗ ಜಗತ್ತಿನ ಅತಿ ದೊಡ್ಡ ಸಾವಯವ ಉತ್ಪಾದಕ ದೇಶವೂ ಭಾರತ.
ಜಾಗತಿಕ ಮಹಾಯುದ್ಧಗಳ ಬಳಿಕ ಆಹಾರಕ್ಕೆ ಬೇಡಿಕೆ ಹೆಚ್ವಾಯಿತು. ಜನಸಂಖ್ಯೆಯೂ ಬೆಳೆಯಿತು. ಆಹಾರ ಬೇಡಿಕೆ ಪೂರೈಸುವ ಸಲುವಾಗಿ ಸುಲಭವಾಗಿ, ವೇಗವಾಗಿ ಬೆಳೆಯುವ ಭ್ರಮೆಯೊಂದಿಗೆ ರಾಸಾಯನಿಕ ಕೃಷಿಯತ್ತ ಜಗತ್ತು ಮುಖಮಾಡಿತು. ಅದರಿಂದ ಆಹಾರ ಉತ್ಪಾದನೆ ಹೆಚ್ಚಿತು ನಿಜ. ಆದರೆ ಮಣ್ಣಿನ ಫಲವತ್ತತೆ ನಶಿಸುತ್ತಾ ಬಂತು. ಭೂಮಿ ಫಲವತ್ತತೆ ಕಳೆದುಕೊಂಡು ಬಂದಂತೆ ಇನ್ನಷ್ಟು ರಾಸಾಯನಿಕ ಗೊಬ್ಬರ ತಂದು ಸುರಿಯಲಾಯಿತು. ಇದು ಜೀವಕ್ಕೆ ಕಂಟಕ ಎಂಬ ವಾಸ್ತವ ಜನರಿಗೆ ನಿಧಾನವಾಗಿ ಅರಿವಾಗತೊಡಗಿದೆ.
ಇದೆಲ್ಲದಕ್ಕೆ ಇರುವ ಪರಿಹಾರ ಒಂದೇ. ಅದುವೇ ಸಾವಯವ ಕೃಷಿ. ಸಾವಯವ ಕೃಷಿಯಿಂದಲೂ ದೊಡ್ಡ ಪ್ರಮಾಣದ ಕೃಷಿ ಉತ್ಪಾದನೆ ಸಾಧ್ಯ. ತಿಳಿವಳಿಕೆ ಬೇಕಷ್ಟೇ.
ಕೆಲವು ಔಷಧೀಯ, ಸಾವಯವ ಗಿಡ, ಬೆಳೆಗಳನ್ನು (ಮಾರುಕಟ್ಟೆಗೆ) ಒಣಗಿಸುವ ವಿಧಾನ

ತುಳಸಿ: ತುಳಸಿಯನ್ನು ಹೂ ಬರುವುದಕ್ಕಿಂತ ಮೊದಲು ನೆಲದಿಂದ ಅರ್ಧ ಅಡಿ ಎತ್ತರಕ್ಕೆ ಕತ್ತರಿಸಿ ಬಿಸಿಲಿಗೆ ಹಾಕಬೇಕು. ಕಳೆ ಇಲ್ಲದಂತೆ ನೋಡಿಕೊಳ್ಳಬೇಕು. ನೇರ ಬಿಸಿಲೂ ಇರಬಾರದು. ಕೆಳಗೆ ಟಾರ್ಪಲ್ ಹಾಸಿ ಅದರಲ್ಲಿ ಇಟ್ಟು ಹದವಾದ ಬಿಸಿಲಲ್ಲಿ ಎರಡರಿಂದ ಮೂರು ದಿನ ಇಡಬೇಕು. ಬಳಿಕ .ದಂಟಿನಿಂದ ಎಲೆ ಬೇರ್ಪಡಿಸಿದಾಗ ಒಣಗಿದ ತುಳಸಿ ಲಭ್ಯ. ಎಲೆಯ ಜತೆ ಸಣ್ಣ ದಂಟು ಅಂದರೆ ಶೇ ೫ರಷ್ಟು ಗಾತ್ರದ ದಂಟು ಇದ್ದರೆ ನಡೆಯುತ್ತದೆ. ಮಳೆಗಾಲ ತುಳಸಿ ಒಣಗಿಸುವುದು ಕಷ್ಟ. ಆದರೆ ಬಟ್ಟೆ ಒಣಗಲು ಹಾಕಿದಂತೆ ತುಳಸಿ ಗಿಡವನ್ನು ಸಣ್ಣದಾಗಿ ತುಂಡರಿಸಿ ಹಗ್ಗದಲ್ಲಿ ತೂಗುಹಾಕಿ ಮೇಲಿನಿಂದ ಫ್ಯಾನ್ ಹಾಕಬೇಕು. ಒಂದು ವಾರದಲ್ಲಿ ತುಳಸಿ ಒಣಗುತ್ತದೆ.


ತಿಮರೆ (ಬ್ರಾಹ್ಮಿ): ತಿಮರೆಯನ್ನು ಕಳೆ ಇಲ್ಲದಂತೆ ಬೇರು ಇಲ್ಲದಂತೆ ತೆಗೆದು ಚೆನ್ನಾಗಿ
ತೊಳೆದು ಟಾರ್ಪಲ್ ಮೇಲೆ ಹಾಸಿ ಹದ ಬಿಸಿಲಿನಲ್ಲಿ ಮೂರು ನಾಲ್ಕು ದಿನ ಒಣಗಿಸಬೇಕು. ಮಳೆಗಾಲ ಒಣಗಿಸುವುದು ಕಷ್ಟ. ಆದರೆ ಡ್ರೈಯರ್ ನಲ್ಲಿ 2 ದಿನ ಇಟ್ಟು ಒಣಗಿಸಬಹುದು. ನೆಲದಲ್ಲಿ ಹಾಸಿ ಫ್ಯಾನ್ ಹಾಕಿಯೂ ಒಣಗಿಸಬಹುದು.


ಜಾಯಿಕಾಯಿ: ಜಾಯಿಕಾಯಿ ಬಹುತೇಕ ಮಳೆಗಾಲದಲ್ಲೇ ಬಿಡುವ ಔಷಧೀಯ ಹಣ್ಣು. ಅದನ್ನು ಮರದಿಂದ ನೆಲಕ್ಕೆ ಬೀಳಲು ಬಿಡಬಾರದು. ಬಿದ್ದರೆ ಹುಳ ಪ್ರವೇಶಿಸುತ್ತದೆ. ಇದರಿಂದ ಫಂಗಸ್, ಶಿಲೀಂದ್ರ ಬೆಳೆಯುತ್ತದೆ. ಅಫ್ಲಾಟಾಸ್ಕಿನ್ನಂತಹ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಕಾಯಿಯ ಬುಡ ಒಡೆಯಯವಂತಹ ಸ್ಥಿತಿಯಲ್ಲಿ ಜಾಯಿಕಾಯಿಯನ್ನು ಬಿಡಿಸಿ, ಒಳಗಿನ ಹೂವನ್ನು ಡ್ರೈಯರ್‌ನಲ್ಲಿ ಹಾಕಿ ಒಣಗಿಸಬೇಕು. ಮಳೆಗಾಲದಲ್ಲೇ ಇದು ಮಾಗುವುದರಿಂದ ಬಿಸಿಲಲ್ಲಿ ಇದನ್ನು ಒಣಗಿಸುವ ಪ್ರಮೇಯ ಕಡಿಮೆ ಇದೆ.
ರಾಸಾಯನಿಕಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ, ಜಾಯಿಕಾಯಿಯನ್ನು ಒಣಗಿಸಿದರೆ ಅದಕ್ಕೆ ಅಂvರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಭಾರತದಲ್ಲಿ ಬೆಳೆದ ಜಾಯಿಕಾಯಿಗೆ ಇದುವರೆಗೆ ಉತ್ತಮ ಧಾರಣೆ ಸಿಗದೆ ಇರಲು ನಾವು ಒಣಗಿಸುವ ವಿಧಾನದಲ್ಲಿ ಸುಧಾರಣೆ ಆಗದೆ ಇರುವುದೇ ಕಾರಣ.


ಗಾಂಧಾರಿ ಮೆಣಸು: ಗಾಂಧಾರಿ ಮೆಣಸು (ಸೂಜಿ ಮೆಣಸು) ವಷವಿಡೀ ಬೆಳೆಯುವ ಬೆಳೆ. ಮೆಣಸು ಕೆಂಪಾದಾಗ ತೊಟ್ಟು ಸಹಿತ ಕೊಯ್ದು ಬಿಸಿಲಲ್ಲಿ ಒಣಗಲು ಹಾಕಬೇಕು. ಒಣಗಿದ ನಂತರ ತೊಟ್ಟು ಬೇರ್ಪಡಿಸಬೇಕು. ಮಳೆಗಾಲದಲ್ಲಿ ಇದನ್ನು ಒಣಗಿಸುವುದು ಕಷ್ಟ. ಆದರೆ ಕಾಳುಮೆಣಸು ಒಣಗಿಸಲು ಬಳಸುವ ಡ್ರೈಯರ್‌ನಲ್ಲಿ ಇಟ್ಟು ಒಣಗಿಸಬಹುದು.


ಹಲಸಿನ ಗುಜ್ಜೆ: ಎಳೆಯ ಹಲಸು ಅಥವಾ ಹಲಸಿನ ಗುಜ್ಜೆಯನ್ನು ಎರಡು ಕೆ.ಜಿ.ಯಷ್ಟು ತೂಗುವಾಗ ಮರದಿಂದ ಕೊಯ್ಯಬೇಕು. ಅದರ ಬೀಜದಲ್ಲಿ ಕಾಸೆ ಕಟ್ಟಿರಬಾರದು. ಗುಜ್ಜೆಗೆ ಅದರದ್ದೇ ಆದ ಮಾರುಕಟ್ಟೆ ಇದೆ. ಹಲಸಿನ ಬೀಜ: ಹಲಸಿನ ಬೀಜವನ್ನು ಡ್ರೈಯರ್‌ನಲ್ಲಿ ಮೂರು ದಿನ ಇಟ್ಟು ಒಣಗಿಸಬೇಕು.

ಉಮೇಶ ಅಡಿಗ, ತಾಂತ್ರಿಕ ನಿರ್ದೇಶಕರು, ಫಲದ ಆಗ್ರೊ ರೀಸರ್ಚ್ ಫೌಂಡೇಶನ್ ಪ್ರೈ ಲಿ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.