HomePage_Banner
HomePage_Banner
HomePage_Banner
HomePage_Banner

ಕಾಯರ್ತೋಡಿ: ಶ್ರಮದಾನ

ಶ್ರೀ ರಕ್ತೇಶ್ವರಿ ಸೇವಾ ಟ್ರಸ್ಟ್, ಶ್ರೀ ರಕ್ತೇಶ್ವರಿ ಸೇವಾ ಸಮಿತಿ, ಶ್ರೀನಿಧಿ ಮಹಿಳಾ ಮಂಡಲ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹ ಹಾಗೂ ಶ್ರಮದಾನ ಮಾಡಲಾಯಿತು.

ಸುಮಾರು ಮೂವತ್ತು ವರ್ಷಗಳಿಂದ ಸೂರ್ತಿಲ ಅಂಗನವಾಡಿ ಶಾಲಾ ಬಳಿ ಕರೆಂಟ್ ಲೈನ್ ಗೆ ಸಮಸ್ಯೆಯಾಗಿದ್ದ ಮರದ ಗಲ್ಲಿನ ತೆರವು ಮತ್ತು ಪಡ್ಪು ರಸ್ತೆಯಿಂದ ಕಾಯರ್ತೋಡಿ ಸೂರ್ತಿಲ ಬಳಿಯ ಮಜಲು ತನಕ ಕರೆಂಟ್ ಲೈನಿಗೆ ತಾಗಿದ್ದ ಮರದ ಕೊಂಬೆ ಮತ್ತು ರಸ್ತೆ ಬದಿಯ ಕಾಡುಗಳನ್ನು ರಕ್ತೇಶ್ವರಿ ಸೇವಾ ಸಮಿತಿಯ ಸದಸ್ಯರು, ಟ್ರಸ್ಟ್, ಮಹಿಳಾ ಮಂಡಲದ ವತಿಯಿಂದ ಶ್ರಮದಾನ ಮಾಡಲಾಯಿತು.


ಇತ್ತೀಚೆಗೆ ಮಳೆಯಿಂದ ಮನೆ ಕಳೆದುಕೊಂಡವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಸಂಗ್ರಹಿಸಲಾಯಿತು. ಪ್ರಶಾಂತ್ ಕಾಯರ್ತೋಡಿಯವರು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಿದರು. ಬಾಲಕೃಷ್ಣ ಶೆಟ್ಟಿ ಪಡ್ಪು, ಕುಶಾಲಪ್ಪ ಸೂರ್ತಿಲ, ತೀರ್ಥರಾಮ ಕಾಯರ್ತೋಡಿಯವರು ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಸುಮಾರು ಎಪ್ಪತ್ತು ಮಂದಿ ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.