HomePage_Banner
HomePage_Banner

ಅಂಗಾರರಿಗೆ ಮಂತ್ರಿ ಪದವಿ ಸಿಗುವವರೆಗೆ ತಟಸ್ಥರಾಗುಳಿಯಲು ಸುಳ್ಯದ ಮುಖಂಡರ ನಿರ್ಧಾರ

ಆತುರದ ನಿರ್ಧಾರ ಬೇಡ – ಕೋಟ ಶ್ರೀನಿವಾಸ ಪೂಜಾರಿ ಮನವಿ

ನಾಳೆ ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿ

ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿ ಪದವಿ ತಪ್ಪಿದ ಹಿನ್ನಲೆಯಲ್ಲಿ ರಾಜೀನಾಮೆಗೆ ಮುಂದಾದ ಸುಳ್ಯದ ಮುಖಂಡರೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸಮಾಲೋಚನೆ ನಡೆಸಿದ್ದಾರೆ.
ಸುಳ್ಯ ಶಾಸಕ ಅಂಗಾರ ಉಪಸ್ಥಿತಿಯಲ್ಲಿ ಮುಖಂಡರ ಸಭೆಯೊಂದು ನಡೆಯಿತು.

ಸಭೆಯಲ್ಲಿ ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಅಭಿಪ್ರಾಯ ಮಂಡಿಸಿ ನಿನ್ನೆ ರಾತ್ರಿಯವರೆಗೂ ಮಂತ್ರಿಸ್ಥಾನ ಖಚಿತವಾದರೂ ಇಂದು ಬೆಳಿಗ್ಗೆ ತಪ್ಪುವ ಮೂಲಕ ಸುಳ್ಯ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಪ್ರತಿಭಟಿಸಿ ನಾವು ನಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿದರು. ಉಳಿದ ಮುಖಂಡರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.


ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ, ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ಅಲ್ಲಿಯವರೆಗೆ ಕಾದುನೋಡೋಣ ಎಂದು ಹೇಳಿದರು.

ಗುರುವಾರ ಜಿಲ್ಲಾಮಟ್ಟದಲ್ಲಿ ಶಾಸಕರು ಹಾಗೂ ಸಂಸದರ ಸಭೆ ಕರೆದು ನಮ್ಮ ತೀರ್ಮಾನ ಹೇಳುವುದಾಗಿ ಸಂಜೀವ ಮಠಂದೂರು ಹೇಳಿದರು.
ಅಂಗಾರರಿಗೆ ಮಂತ್ರಿಸ್ಥಾನವೇ ಸಿಗಬೇಕು ಎಂಬುದು ನಮ್ಮ ಒತ್ತಾಯ. ಅದುವರೆಗೆ ನಾವು ನಮ್ಮ ಹುದ್ದೆಗಳಲ್ಲಿ ತಟಸ್ಥರಾಗಿ ಉಳಿಯುತ್ತೇವೆ. ರಾಜ್ಯದ ನಾಯಕರು ಬಂದು ನಮಗೆ ಬುದ್ದಿವಾದ ಹೇಳುವ ಅಗತ್ಯವಿಲ್ಲ ಎಂಬ ಮಾತುಗಳನ್ನು ಸಭೆಯಲ್ಲಿದ್ದ ಮುಖಂಡರು ಹೇಳಿದರೆನ್ನಲಾಗಿದೆ.
ಬಿಜೆಪಿ ನಾಯಕರಾದ ವೆಂಕಟ್ ವಳಲಂಬೆ, ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಚನಿಯ ಕಲ್ತಡ್ಕ, ಸುರೇಶ್ ಕಣೆಮರಡ್ಕ, ಸಂತೋಷ್ ಜಾಕೆ, ರಾಧಾಕೃಷ್ಣ ಬೊಳ್ಳೂರು, ಕೃಷ್ಣ ಶೆಟ್ಟಿ ಕಡಬ, ದಿನೇಶ್ ಮೆದು,  ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

1 Comment

  1. Ganesh bhat

    ಪಕ್ಷನಿಷ್ಟಾವಂತ ಅಂಗಾರ ಬಂಗಾರ ಮಂತ್ರಿಯಾಗಿ ಬರಲೇಬೇಕು… ಅಲ್ಲಿಯವರೆಗೆ ದ.ಕ ದ ಬಿಜೆಪಿ ಪಕ್ಷದ ಪ್ರಮುಖರು ನಾಳೆ ಸಭೆ ಮುಗಿಯುವುದರೊಳಗೆ ರಾಜೀನಾಮೆ ಕೊಟ್ಟು ನಮ್ ಶಾಸಕರನ್ನ ಬೆಂಬಲಿಸಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.