HomePage_Banner
HomePage_Banner
HomePage_Banner

ಅಂಗಾರರಿಗೆ ಕೊನೆಕ್ಷಣದಲ್ಲಿ ಮಂತ್ರಿ ಸ್ಥಾನ ಮಿಸ್: ಕ್ಷಣ ಕ್ಷಣದ ಮಾಹಿತಿ ನೀಡಿದ ಸುದ್ದಿ ವೆಬ್ ಸೈಟ್

 

 

ಬೆಂಗಳೂರಿನಿಂದಲೂ ಸಾಕ್ಷಾತ್ ವರದಿ

ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಿದ ಕಾರ್ಯಕರ್ತರು

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ‌ ಎಸ್.‌ಅಂಗಾರರಿಗೆ ಮಂತ್ರಿ ಪದವಿ ಮಿಸ್ ಆದ ಬಳಿಕದ ಕ್ಷಣ ಕ್ಷಣದ ಮಾಹಿತಿಯನ್ನು ಸುದ್ದಿ ಆನ್ ಲೈನ್ ನ್ಯೂಸ್ ವೆಬ್ ಸೈಟ್ ನೀಡುವ ಮೂಲಕ ಸಂಚಲನಕ್ಕೆ ಕಾರಣವಾಯಿತು.

ಇಂದು ಮುಂಜಾನೆಯೇ ಅಂಗಾರರಿಗೆ ಸಚಿವ ಪದವಿ ಮಿಸ್ ಆದ ಕುರಿತು ವೆಬ್ ಸೈಟ್ ವರದಿ ಪ್ರಕಟಿಸಿತ್ತು.‌ ಆ ಬಳಿಕ ಬೆಂಗಳೂರಿನಲ್ಲಿ ನಡೆದ ಕ್ಷಣ ಕ್ಷಣದ ವಿದ್ಯಮಾನ, ಶಾಸಕರ, ಮುಖಂಡರ, ಕಾರ್ಯಕರ್ತರ ಅಸಮಾಧಾನ, ಅಲ್ಲಿ ನಡೆದ ಸಂಧಾನ ಸಭೆ, ಮುಖಂಡರ ರಾಜೀನಾಮೆ ನಿರ್ಧಾರ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನವೊಲಿಕೆ ವಿದ್ಯಮಾನಗಳ ವರದಿ, ಫೋಟೋ, ವಿಡಿಯೋಗಳು ಪ್ರಕಟವಾಯಿತು. ಅಂಗಾರ ಹಾಗೂ ಸಂಜೀವ ಮಠಂದೂರು ಅವರ ಹೇಳಿಕೆಗಳು ಪ್ರಸಾರವಾಯಿತು. ಸುದ್ದಿ ವರದಿಗಾರರು ಬೆಂಗಳೂರಿನಲ್ಲಿದ್ದುಕೊಂಡೇ ಸಾಕ್ಷಾತ್ ವರದಿ ನೀಡಿದರು.

ಇತ್ತ ಸುಳ್ಯದಲ್ಲಿ ನಡೆದ ಘಟನೆಗಳು, ಮುಖಂಡರು ಹಾಗೂ ಕಾರ್ಯಕರ್ತರ ಹೇಳಿಕೆಗಳು ಕೂಡಾ ಪ್ರಕಟವಾಯಿತು. ವಿಶೇಷವೆಂದರೆ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ಅಂಗಾರರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ತಮ್ಮ ಅನಿಸಿಕೆಗಳನ್ನು ಕಳುಹಿಸಿಕೊಡುತ್ತಿದ್ದರು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆ, ಬೆಂಗಳೂರಿಗೆ ಹೋಗಿದ್ದ ಸುಳ್ಯದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಜಗತ್ತಿನಾದ್ಯಂತ ಇರುವ ಸುಳ್ಯದವರು ಈ ದಿನದ ಬೆಳವಣಿಗೆಗಳಿಗಾಗಿ‌ ಸುದ್ದಿ ವೆಬ್ ಸೈಟ್ ನೋಡುವಂತಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.