HomePage_Banner
HomePage_Banner
HomePage_Banner
HomePage_Banner
Breaking News

ಬೇಡಿಕೆ ಸಲ್ಲಿಸಿ ಹಿಂದೆ ಯಶಸ್ವಿಯಾಗಿದ್ದೇವೆ, ಈಗಲೂ ಯಶಸ್ವಿಯಾಗುವ ವಿಶ್ವಾಸವಿದೆ : ಎ.ವಿ.ತೀರ್ಥರಾಮ


ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಮಂತ್ರಿಸ್ಥಾನ ತಪ್ಪಿದ ಹಿನ್ನಲೆಯಲ್ಲಿ ನಾವು ಅಸಹಕಾರ ಚಳುವಳಿಗೆ ಮುಂದಾಗಿದ್ದು ಈ ಮೂಲಕ ನಮ್ಮ ಬೇಡಿಕೆಯಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ವಿ.ತೀರ್ಥರಾಮ ಹೇಳಿದ್ದಾರೆ.
ಸುಳ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ಸಂದರ್ಭ, 7 ವರ್ಷಗಳ ಹಿಂದೆ ಕೂಡಾ ಪಕ್ಷದ ಮುಖಂಡರು ರಾಜೀನಾಮೆ ನೀಡಿ ಪ್ರಯೋಜನವಾಗಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ಸುಳ್ಯದಿಂದ ನಿಯೋಗ ಹೋಗಿ ಒತ್ತಾಯಿಸಿದ್ದೆವು. ಆಗಿನ ಸನ್ನಿವೇಶದ ಅಸಹಾಯಕತೆಯನ್ನು ಮುಖಂಡರು ಮನವರಿಕೆ ಮಾಡಿದ್ದರು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಬೇಡಿಕೆ ಸಚಿವ ಸ್ಥಾನ ಆಗಿರದೇ ಯಡಿಯೂರಪ್ಪನವರು ಘೋಷಿಸಿದ್ದ ವಿಶೇಷ ಪ್ಯಾಕೇಜ್ ಅನುಷ್ಠಾನಕ್ಕೆ ಬರುವುದಾಗಿತ್ತು. ಇದರಲ್ಲಿ ನಾವು ಯಶಸ್ವಿಯಾಗಿದ್ದೆವೆ. ಹೀಗಾಗಿ ಈ ಬಾರಿಯ ಸಾತ್ವಿಕ ಪ್ರತಿಭಟನೆಯಲ್ಲೂ ಯಶಸ್ವಿಯಾಗುತ್ತೇವೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.