HomePage_Banner
HomePage_Banner
HomePage_Banner
HomePage_Banner

ಪತ್ರಕರ್ತರ ಅಸಮಾಧಾನ : ಬಿಜೆಪಿ ಪತ್ರಿಕಾಗೋಷ್ಟಿ ಕಛೇರಿಯಿಂದ ಪ್ರೆಸ್ ಕ್ಲಬ್‌ಗೆ ಶಿಫ್ಟ್!

ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನ ಉಂಟಾಗಿರುವ ಹಿನ್ನಲೆಯಲ್ಲಿ ಬಿಜೆಪಿ ನಡೆಸಿದ ಸಭೆಯ ವೇಳೆ ಪತ್ರಕರ್ತರಿಗೆ ಅಸಮಾಧಾನ ಉಂಟಾಗಿ ನಾಯಕರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಬೇಕಾಯಿತು.
ಬಿಜೆಪಿ ಕಚೇರಿಯಲ್ಲಿ ಸಭೆಯ ಬಳಿಕ ಪತ್ರಿಕಾಗೋಷ್ಟಿ ಆಯೋಜಿಸಲಾಗಿತ್ತು. ಸಭೆಗೆಂದು ಕೆಲವು ಪತ್ರಕರ್ತರು ಹೋದಾಗ, ಇದು ಆಂತರಿಕ ಸಭೆಯಾಗಿದ್ದು ಮಾಧ್ಯಮದವರು ಬರಬಾರದಾಗಿ ವಿನಂತಿಸಿದರು. ಪತ್ರಿಕಾಗೋಷ್ಟಿಗಿಂತ ಕೆಲವೇ ನಿಮಿಷ ಮೊದಲು ಅಲ್ಲಿಗೆ ತೆರಳಿದ ಪತ್ರಕರ್ತರಿಗೂ ಇದೇ ಅನುಭವವಾಯಿತು. ಹೀಗಾಗಿ ಅಸಮಾಧಾನಗೊಂಡ ಎಲ್ಲಾ ಪತ್ರಕರ್ತರು ಬಿಜೆಪಿ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸದೇ ಪ್ರೆಸ್ ಕ್ಲಬ್‌ಗೆ ಹೋಗಿ ಕುಳಿತರು. ಬಳಿಕ ಅಲ್ಲಿಗೆ ಬಂದ ಬಿಜೆಪಿ ನಾಯಕರು ಪತ್ರಿಕಾಗೋಷ್ಟಿ ನಡೆಸಿದರು.
ಈ ವೇಳೆ ತಮ್ಮ ಅಸಮಾಧಾನ ಹೊರಗೆಡಹಿದ ಪತ್ರಕರ್ತರು, ಇದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ವಿಚಾರ. ನಿಮ್ಮ ಆಕ್ರೋಶ ಮತ್ತು ಅಸಮಾಧಾನ ಮಾಧ್ಯಮಗಳ ಮೂಲಕವೇ ನಾಯಕರನ್ನು ಮುಟ್ಟಬೇಕಾಗಿದೆ. ಹೀಗಿದ್ದೂ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಿರುವುದೇಕೆ? ಅಲ್ಲದೇ ಪತ್ರಿಕಾಗೋಷ್ಟಿಗೆಂದು ಬಂದ ಕೆಲ ಪತ್ರಕರ್ತರಿಗೂ ಅಲ್ಲಿ ಕೆಟ್ಟ ಅನುಭವವಾಗಿದೆ ಎಂದು ಹೇಳಿದರು.
ಕಾರ್ಯಕರ್ತರ ಆಕ್ರೋಶದ ಮಾತುಗಳು ಬೇರೆ ಅರ್ಥ ಪಡೆಯುವುದು ಬೇಡ ಎಂಬ ನಿಟ್ಟಿನಲ್ಲಿ ಸಭೆಗೆ ಮಾಧ್ಯಮದವರನ್ನು ಆಹ್ವಾನಿಸಿಲ್ಲ ಹೊರತು ಬೇರೆ ಉದ್ದೇಶವಿಲ್ಲ. ನಿಮಗೆ ನೋವಾಗಿದ್ದರೆ ವಿಷಾದ ಸೂಚಿಸುವುದಾಗಿ ಹೇಳಿ ನಾಯಕರು ಪತ್ರಿಕಾಗೋಷ್ಟಿ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.