HomePage_Banner
HomePage_Banner

ಸೆ.02 – 06 : ಸುಳ್ಯ 51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ (ರಿ.) ಮತ್ತು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ 51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಚೆನ್ನಕೇಶವ ದೇವಸ್ಥಾನದಲ್ಲಿ ಸೆ.2ರಿಂದ ಸೆ.೦6ರ ತನಕ ನಡೆಯಲಿದೆ.

ಸೆ.2ರಂದು ಪೂ.7.೦೦ಕ್ಕೆ ಗಣಪತಿ ಹವನ, ಮೂರ್ತಿ ಪ್ರತಿಷ್ಠೆ , ಪೂ 9.೦೦ಕ್ಕೆ ಉತ್ಸವದ ಉದ್ಘಾಟಣೆ, ಪೂ.1೦.೦೦ರಿಂದ ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಪರಾಹ್ನ 3.೦೦ರಿಂದ ಭಜನಾ ಕಾರ್ಯಕ್ರಮ, ಸಂಜೆ 6.೦೦ರಿಂದ ಸಭಾಕಾರ್ಯಕ್ರಮ ಮತ್ತು ಬಹುಮಾನ ವಿತರಣೆ, ರಾತ್ರಿ 7.೦೦ರಿಂದ ಕಾರ್ಯಕ್ರಮ ವೈವಿದ್ಯ ನಡೆಯಲಿದೆ. ಸೆ.೦3ರಂದು ಅಪರಾಹ್ನ 3.೦೦ರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.೦೦ರಿಂದ ಚಿಗುರು ಡ್ಯಾನ್ಸ್ ಅಕಾಡೆಮಿಯವರಿಂದ ನೃತ್ಯ ಸಂಭ್ರಮ, ಸಂಜೆ 7.೦೦ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಸೆ.೦4ರಂದು ಅಪರಾಹ್ನ 3.೦೦ರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.೦೦ರಿಂದ ಹಾಡೊಂದಾ ನಾ ಹಾಡುವೆನು, ಸಂಜೆ 7.೦೦ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸೆ.೦5ರಂದು ಭಜನಾ ಕಾರ್ಯಕ್ರಮ, ಸಂಜೆ 6.15ರಿಂದ ಶ್ರೀ ಕೃಷ್ಣ ಪಾರಿಜಾತ – ನರಕಾಸುರ ವಧೆ ಯಕ್ಷಗಾನ ನಡೆಯಲಿದೆ. ಸೆ.೦6ರಂದು ಬೆ.7.೦೦ರಿಂದ 108 ತೆಂಗಿನಕಾಯಿ ಗಣಪತಿ ಹವನ, ಮಧ್ಯಾಹ್ನ 12.3೦ಕ್ಕೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 3.೦೦ರಿಂದ ಅಲಕೃಂತ ಮಂಟಪದಲ್ಲಿ ವಾದ್ಯಘೋಷ, ಚೆಂಡೆ ವಾದನಗಳೊಂದಿಗೆ ಶೋಭಾಯಾತ್ರೆ ಮೂಲಕ ಪಯಸ್ವಿನಿ ನದಿಯಲ್ಲಿ ಜಲಸ್ಥಂಬನಗೊಳ್ಳುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.