ಬೂಡು ಭಗವತೀ ಯುವ ಸೇವಾ ಸಂಘದಿಂದ ಶ್ರೀಕೃಷ್ಣ ಜನ್ಮಾಷ್ಟಮಿ – ಶ್ರೀಕೃಷ್ಣನ ಸ್ಮರಣೆ ನಿರಂತರ : ಎನ್.ಎ.ರಾಮಚಂದ್ರ

Advt_Headding_Middle
Advt_Headding_Middle
Advt_Headding_Middle


‘’ಭಗವಂತ ಶ್ರೀಕೃಷ್ಣ ಸಮಾಜಕ್ಕೆ ನೀಡಿದ ಆದರ್ಶಗಳನ್ನು ನಮ್ಮ ಹಿರಿಯರು ಹಾಗೂ ನಾವು ಪಾಲಿಸುತ್ತಾ ಸಮಾಜದಲ್ಲಿ ನಡೆಯುತ್ತಿzವೆ. ಇಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆಯೂ ಚರಿತ್ರೆಯನ್ನು ತ೫ಇಳಿದು ಮುನ್ನಡೆಯುವುದರಿಂದ ಶ್ರೇಯಸ್ಸು ಲಭಿಸುತ್ತದೆ“ ಎಂದು ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಹೇಳಿದರು.

 


ಆ.೨೩ರಂದು ಬೂಡು-ಕೇರ್ಪಳ-ಕುರುಂಜಿಗುಡ್ಡೆ ಇಲ್ಲಿಯ ಶ್ರೀ ಭಗವತಿ ಯುವ ಸೇವಾ ಸಂಘದ ಆಶ್ರಯದಲ್ಲಿ ಊರಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ನಡೆದ ೧೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

 


ಸಂಘದ ಅಧ್ಯಕ್ಷ ವಾಸುದೇವ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಲವಲಿಕಾರ್-ರಾಜಪುರ ಸಾರಸ್ವತ ಸಮಾಜದ ಅಧ್ಯಕ್ಷ ವೈಕುಂಠ ಪ್ರಭು, ಸುಳ್ಯ ಎನ್ನೆಂಸಿ ಎನ್.ಎಸ್.ಎಸ. ಘಟಕಾಧಿಕಾರಿ ಸಂಜೀವ ಕುದ್ಪಾಜೆ ಹಾಗೂ ಚಿತ್ರಲೇಖ, ಬೂಡು ಪ್ರಕೃತಿ ಯುವಕ ಸಂಘದ ಅಧ್ಯಕ್ಷ ಶಿವಪ್ಪ ಬೂಡು, ಸುಳ್ಯ ಕುಂ ಕುಂ ಫ್ಯಾಶನ್ ಮಾಲಕ ಭೀಮಾರಾಮ್ ಪಟೇಲ್, ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಶಿವಪ್ರಸಾದ್ ಕೇರ್ಪಳ, ಭಗವತೀ ಸಂಘದ ಸ್ಥಾಪಕಾಧ್ಯಕ್ಷ ಸದಾಶಿವ ಮೆಸ್ಕಾಂ, ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕರಾದ ಅಶ್ವಿನ್ ಹಾಗೂ ಧನ್ಯಶ್ರೀ ವೇದಿಕೆಯಲ್ಲಿದ್ದರು.
ಸನ್ಮಾನ : ಕಾರ್ಯಕ್ರಮ ನಡೆಸಲು ಸ್ಥಳವಕಾಶ ನೀಡುತ್ತಿರುವ ಬಾಲವಲಿಕಾರ್-ರಾಜಪುರ ಸಾರಸ್ವತ ಸಮಾಜದ ಅಧ್ಯಕ್ಷ ವೈಕುಂಠ ಪ್ರಭುರನ್ನು ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಸ್ವಾಗತಿಸಿದರು. ಕುಸುಮಾಧರ ಬೂಡು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.