HomePage_Banner
HomePage_Banner
HomePage_Banner

ಶಾಸಕ ಅಂಗಾರರನ್ನು ಭೇಟಿ ಮಾಡಿದ ಜಿಲ್ಲಾ ಬಿಜೆಪಿ ಮುಖಂಡರು

 

ಮುಖ್ಯಮಂತ್ರಿ ಬಳಿಗೆ ಶಾಸಕರ ನಿಯೋಗ ತೆರಳಲು ನಿರ್ಧಾರ

ಅಸಹಕಾರ ಆಂದೋಲನ ಮುಂದುವರಿಕೆ : ಸುಳ್ಯ ಬಿಜೆಪಿ ಸ್ಪಷ್ಟನೆ

ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಜಿಲ್ಲಾ ಬಿಜೆಪಿ ಮುಖಂಡರು ಇಂದು ಶಾಸಕ ಎಸ್.ಅಂಗಾರರನ್ನು ಅವರ ದೊಡ್ಡತೋಟ ಮನೆಯಲ್ಲಿ ಭೇಟಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೇತೃತ್ವದಲ್ಲಿ ಮಾಜಿ ಎಮ್. ಎಲ್. ಸಿ.ಗಳಾದ ಮೋನಪ್ಪ ಭಂಡಾರಿ ಮತ್ತು ಗಣೇಶ್ ಕಾರ್ಣಿಕ್ ಭೇಟಿ ಮಾಡಿ ಚರ್ಚಿಸಿದರು.

ಆ ಬಳಿಕ ಮಂಡಲ ಸಮಿತಿ ಪ್ರಮುಖರೊಡನೆ ಸುಳ್ಯದಲ್ಲಿ ಮಾತುಕತೆ ನಡೆಸಿದರು. ಸುಳ್ಯದ ಸಂಘಟನೆ ಹಾಗೂ ಕಾರ್ಯಕರ್ತರ ಮನೋಭಿಲಾಷೆಯನ್ನು ಪರಿಗಣಿಸಿ ಅತಿ ಶೀಘ್ರವಾಗಿ ಸುಳ್ಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಸುಳ್ಯದ ಬಿಜೆಪಿಯ ಪ್ರಮುಖರ ನಿಯೋಗವು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದೆಂದು ತೀರ್ಮಾನಿಸಲಾಯಿತು.

ಮುಂದಿನ ತೀರ್ಮಾನದ ವರೆಗೆ ನಮ್ಮ ಅಸಹಕಾರ ಚಳವಳಿ ಹಾಗೂ ರಾಜೀನಾಮೆ ಪ್ರಕ್ರಿಯೆ ನಮ್ಮ ನಿರ್ಧಾರದಂತೆಯೇ ಮುಂದುವರಿಯುತ್ತದೆ ಎಂದು ಭಾ.ಜ.ಪಾ.ಮಂಡಲ ಸಮಿತಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.