HomePage_Banner
HomePage_Banner
HomePage_Banner

ಧವನ್ ದೇವರಗುಂಡಗೆ ಕೃಷ್ಣವೇಷ ಸ್ಪರ್ಧೆಗಳಲ್ಲಿ ಮೂರು ಬಹುಮಾನ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಳ್ಯದ ವಿವಿಧ ಕಡೆಗಳಲ್ಲಿ ನಡೆದ “ಶ್ರೀ ಕೃಷ್ಣ ವೇಷ” ಸ್ಪರ್ಧೆಗಳಲ್ಲಿ ಧವನ್ ದೇವರಗುಂಡ ಪ್ರಥಮ ಸ್ಥಾನ ಗಳಿಸಿದ್ದಾನೆ.


ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಮತ್ತು ಅಮ್ಮ ಚಿಣ್ಣರ ಮನೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೆ.ವಿ.ಜಿ.ಐ.ಪಿ.ಎಸ್. ಇಲ್ಲಿನ ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಯಶೋದೆ-ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಹಾಗೂ ಯಾದವ ಸಭಾ ಕೇಂದ್ರ ಸಮಿತಿ (ರಿ.) ಮಂಗಳೂರು ಯಾದವ್ ಚಾರಿಟೇಬಲ್ ಟ್ರಸ್ಟ್ ಶ್ರೀಕೃಷ್ಣ ನಗರ ಮಂಡೆಕೋಲು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಈ ಪುಟಾಣಿ ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ನಾಗೇಶ್ ದೇವರಗುಂಡ, ಎನ್ನೆಂಸಿಯ ಉಪನ್ಯಾಸಕಿ ಶ್ರೀಮತಿ ರೇಶ್ಮಾ ನಾಗೇಶ್ ದಂಪತಿಯ ಪುತ್ರ.
ಧವನ್ ದೇವರಗುಂಡ ಸುಳ್ಯ ಕೆ.ವಿ.ಐ.ಪಿ.ಎಸ್. ಇಲ್ಲಿನ ಯುಕೆಜಿ ವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.