HomePage_Banner
HomePage_Banner
HomePage_Banner

ಸೆ.2 -3: ಕುಕ್ಕುಜಡ್ಕದಲ್ಲಿ 27 ನೇ ವರ್ಷದ ಗಣೇಶೋತ್ಸವ


ಕುಕ್ಕುಜಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 27 ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.2 ಮತ್ತು 3 ರಂದು ಕುಕ್ಕುಜಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ವಠಾರದಲ್ಲಿ ನಡೆಯಲಿರುವುದು.ವೇ|ಮೂ|ರಾಧಾಕೃಷ್ಣ ಜೋಗಿಯಡ್ಕ ರವರ ನೇತೃತ್ವದಲ್ಲಿ ಪೂ.ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಅನ್ನ ಸಂತರ್ಪಣೆಯಾಗಲಿರುವುದು.ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು.ಸಂಜೆ ಗಂಟೆ 5.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯಾರ್ಪಣಂ,ನೃತ್ಯ ವೈವಿಧ್ಯ, ಗಂ.6.30 ರಿಂದ ಧಾರ್ಮಿಕ ಸಭೆ, ರಾತ್ರಿ ಗಂ.9.00 ರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ಪ್ರದರ್ಶನವಾಗಲಿರುವುದು.ಆ.3 ರಂದು ಪೂ.ಗಂ.8.30 ರಿಂದ ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆಯಾಗಲಿರುವುದು.ಗಂ.10 ಕ್ಕೆ ವಿಶೇಷ ಮೋದಕ ಪೂಜೆ, ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆಯಾಗಿ ಅಪರಾಹ್ನ ಗಂಟೆ 3.30 ರಿಂದ ಶ್ರೀ ಗಣೇಶನ ಶೋಭಾಯಾತ್ರೆಯು ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.