HomePage_Banner
HomePage_Banner

ದೇವರ ಸ್ಮರಣೆಯಿಂದ ಕಷ್ಟ ನಿವಾರಣೆ : ಮುಕ್ತಾನಂದ ಸ್ವಾಮೀಜಿ

 

ದೇವರು ಮತ್ತು ಭಕ್ತರ ನಡುವಿನ ಸಂಬಂಧ ತಾಯಿ ಮಗುವಿನ ಸಂಬಂಧ ಆಧ್ಯಾತ್ಮಿಕ ವಿಚಾರವನ್ನು ಮೈಗೂಡಿಸಿಕೊಂಡು ಜೀವನ ನಡೆಸಿದರೆ ಜೀವನ ಯಶಸ್ವಿಯಾಗುತ್ತದೆ. ನಿರಂತರ ದೇವರ ಸ್ಮರಣೆಯಿಂದ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಕರಿಂಜೆ ಶ್ರೀ ಶಕ್ತಿ ಗುರು ಮಠದ ಮುಕ್ತಾನಂದ ಸ್ವಾಮೀಜಿ ನುಡಿದರು.

ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ ಎಣ್ಮೂರು ಇದರ ಆಶ್ರಯದಲ್ಲಿ ಆಗಸ್ಟ್ ೨೪ ರಂದು ನಡೆದ ೧೫ ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದರು. ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಮೇಶ್ ಕೆ.ಕೆ. ವಹಿಸಿದ್ದರು. ಕು. ಸಹನಾ ಕುಂದರ್ ಉಡುಪಿ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಮಹಾದಿ ಮುರುಳ್ಯ ಶ್ರೀರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ವಸಂತ ನಡುಬೈಲು, ಎಣ್ಮೂರು ಗ್ರಾಮ ಪಂಚಾಯತ್ ಸದಸ್ಯ ರಘು ಪ್ರಸಾದ್ ಶೆಟ್ಟಿ, ನಿಂತಿಕಲ್ಲು ಕೆ ಎಸ್ ಗೌಡ ವಿದ್ಯಾಸಂಸ್ಥೆಯ ನಿರ್ದೇಶಕರಾದ ಕುಮಾರಸ್ವಾಮಿ ಕೆ.ಎಸ್., ಶ್ರೀಮತಿ ಪದ್ಮಾವತಿ ರೈ ಕುಳಾಯಿತೋಡಿ, ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ರೈ ಕಲ್ಲೇರಿ ವೇದಿಕೆಯಲ್ಲಿದ್ದರು.

ಅಂಗನವಾಡಿ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಸಾರ್ವಜನಿಕರಿಗೆ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು ನಡೆದವು. ಎಣ್ಮೂರು ಪಡ್ಪಿನಂಗಡಿ, ಅಲೆಕ್ಕಾಡಿ, ಕೆಎಸ್ ಗೌಡ ನಿಂತಿಕಲ್ಲು ವ್ಯಾಪ್ತಿಯ ೨೦೧೮-೧೯ ನೇ ಸಾಲಿನ ಶೈಕ್ಷಣಿಕ ವರ್ಷ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಸದಸ್ಯರಾದ ಚಿದಾನಂದ ಕಲ್ಲೇರಿ ಪ್ರಸ್ತಾವನೆಗೈದರು. ಕಾರ್ತಿಕ್ ರೈ ಕಲ್ಲೇರಿ ಸ್ವಾಗತಿಸಿ, ಪ್ರದೀಪ್ ರೈ ವಂದಿಸಿದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.  ಅರುಣ್ ಬಲ್ಕಾಡಿ ಸಹಕರಿಸಿದರು.
ಮಧ್ಯಾಹ್ನ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಪುಣ್ಣಮೆದ ಪೊಣ್ಣು’ ಎಂಬ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ನಡೆಯಿತು. ಯಕ್ಷಗಾನ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನಸಾಗರ ಸೇರಿತ್ತು.

ಸನ್ಮಾನ ಕಾರ್ಯಕ್ರಮ

ಹೈನುಗಾರಿಕೆಗೆ ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು ಎಣ್ಮೂರು, ಕೃಷಿ ಸೇವೆಗಾಗಿ ಬಾಲಕೃಷ್ಣ ನಾಯ್ಕ ಅಲೆಂಗಾರ, ನಿವೃತ್ತ ಯೋಧ ಸುಂದರ ಗೌಡ ಪಿಲಂಕುಜೆ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ ಅವರಿಗೆ ಸನ್ಮಾನ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.