HomePage_Banner
HomePage_Banner
HomePage_Banner

ಗುರುವಾಯೂರ್ ನಲ್ಲಿ ಕಂಡುಬಂದ ಶ್ರೀಕೃಷ್ಣನ ಬಾಲಲೀಲಾ ನೃತ್ಯಾವಳಿ : ವೀಡಿಯೋ ವೈರಲ್

ಹೆಣ್ಣು ಸುದ್ದಿಯಾಗಬೇಕೆಂದರೆ ಕಣ್ಣು ಹೊಡೆಯಬೇಕೆಂದಿಲ್ಲ. ಮಡಕೆ ಹೊಡೆದರೂ ಸಾಕು!

 

ಕೇರಳ ರಾಜ್ಯದ ಗುರುವಾಯೂರಿನಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಅಲ್ಲಿನ  ವೈಷ್ಣವ ಕೆ. ಸುನಿಲ್‌  ಎಂಬ ಹುಡುಗಿ ಶ್ರೀ ಕೃಷ್ಣನ ವೇಷ ಧರಿಸಿ ನಂದಗೋಕುಲವನ್ನೇ ಮತ್ತೆ ಧರೆಗಿಳಿಸಿದಂತೆ ಜನ್ಮಾಷ್ಟಮಿ ಆಚರಿಸಿದ ಪರಿ, ಅವಳ ಮುಗ್ಧ ನೃತ್ಯ ನಿಜಕ್ಕೂ ನೋಡಲು ಮನಮೋಹಕವಾಗಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

  • ಶ್ರೀ ಕೃಷ್ಣ ದ್ವಾರಕೆಗೆ ಬಸ್ ಎಷ್ಟು ಗಂಟೆಗೆ ಎಂದು ವಿಚಾರಿಸುವಂತಿದೆ ಅಲ್ಲವೇ?…
  • ಮನುಷ್ಯರು ದೇವರನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ಗುರುವಾಯೂರು ಕೃಷ್ಣನ ಸನ್ನಿಧಿಯಲ್ಲಿ ಆ ಹುಡುಗಿಯ ಮುಗ್ದತೆಯನ್ನು ಕಂಡು ಸಾಕ್ಷಾತ್ ಕೃಷ್ಣನ ಬಾಲ್ಯದ ಲೀಲೆ ನೋಡಿದಂತಾಯಿತು.
  • ಹೆಣ್ಣು ಸುದ್ದಿಯಾಗಬೇಕೆಂದರೆ ಕಣ್ಣು ಹೊಡೆಯಬೇಕೆಂದಿಲ್ಲ. ಮಡಕೆ ಹೊಡೆದರೂ ಸಾಕು. ಎಂಬೆಲ್ಲಾ ಕಮೆಂಟ್ ಗಳೂ ಇವೆ.

ಆದರೆ ಇದು ಈ ವರ್ಷದ ವಿಡಿಯೋ ಅಲ್ಲ,
ಕಳೆದ ವರ್ಷ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುವ ಮೂಲಕ ಮಡಿಕೆಯನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಸ್ಥಳೀಯರು ಅವರ ವಿಡಿಯೋ ಸೆರೆ ಹಿಡಿದಿದ್ದರು ಎನ್ನಲಾಗುತ್ತಿದೆ. ಏನಾದರಾಗಲಿ ಈ ವಿಡಿಯೋ ಮಾತ್ರ ಈಗ ಸಕತ್ ವೈರಲ್  ಆಗುತ್ತಿದೆ. ಹಲವರು ತಮ್ಮ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.