HomePage_Banner
HomePage_Banner
HomePage_Banner

ಕೊಡೆಂಕಿರಿ ಶ್ರೀಕೃಷ್ಣ ಜನ್ಮಾಷ್ಠಮಿ, ನಿವೃತ್ತ ಎಸ್.ಐ. ಗೋಪಾಲರಿಗೆ ಸನ್ಮಾನ

ಶ್ರೀಕೃಷ್ಣ ಜನ್ಮಾಷ್ಠಮಿ ಸೇವಾ ಸಮಿತಿ ಕೊಡೆಂಕಿರಿ, ಮರಂಗಳ ಇದರ ಆಶ್ರಯದಲ್ಲಿ11ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಆ. 25 ರಂದು ನಡೆಯಿತು. ಬೆಳಿಗ್ಗೆಯಿಂದ ಪುರುಷರಿಗರ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಅಜಿತ್ ಕೆ ವಹಿಸಿದ್ದರು. ನಿವೃತ್ತ ಎಸ್. ಐ. ಗೋಪಾಲ ಎಂ.ರವರನ್ನು ಸನ್ಮಾನಿಸಲಾಯಿತು. ಬ್ರಷ್ಚಾಚಾರ ವಿರೋಧಿ ಮತ್ತು ಅಪರಾಧ ಪತ್ತೆ ವಿಭಾಗದ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರುವಂಜ, ಜಿ.ಪಂ. ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ಮಾಜಿ ತಾ.ಪಂ. ಸದಸ್ಯ ಹರೀಶ್ ರೈ ದೇರಂಪಾಲು, ಬಾಳಿಲ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ರಾವ್ ಉಡುವೆಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಕಾರ್ಯದರ್ಶಿ ರಾಜೇಶ್ ನಾಯ್ಕ್ ಡಿ. ವಾಚಿಸಿದರು. ಸಮಿತಿಯ ಸದಸ್ಯ ರಮೇಶ್ ಗೌಡ ಮರಂಗಳ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ನಾಯ್ಕ್ ದೇರಂಪಾಲು ವಂದಿಸಿದರು. ರಾಜೇಶ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.