ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ಅರಂತೋಡು ,ಸ.ಉ.ಹಿ. ಪ್ರಾ.ಶಾಲೆ ತೊಡಿಕಾನ ಇವರ ಸಹಯೋಗದೊಂದಿಗೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ 2019 ಸ್ಪರ್ಧೆಯಲ್ಲಿ ಕಲ್ಲುಗುಂಡಿ ಸವೇರಪುರ ಕಿರಿಪುಷ್ಪ ಅನುದಾನಿತ ಶಾಲೆಯಿಂದ 54 ವಿದ್ಯಾರ್ಥಿಗಳು ಭಾಗವಹಿಸಿದ್ದು ಹಲವು ಬಹುಮಾನ ಪಡೆದುಕೊಂಡಿದ್ದಾರೆ.
ವೈಯಕ್ತಿಕ ಸ್ಪರ್ಧೆಗಳಲ್ಲಿ ಹಿರಿಯರ ಮತ್ತು ಕಿರಿಯರ ತಮಿಳು ಕಂಠ ಪಾಠ ಪ್ರಥಮ., ಕಿರಿಯರ ವಿಭಾಗದ ಇಂಗ್ಲೀಷ್, ಕೊಂಕಣಿ, ಅರೇಬಿಕ್, ತುಳು ಕಂಠಪಾಠಗಳಲ್ಲಿ ದ್ವಿತೀಯ, ಮತ್ತು ಧಾರ್ಮಿಕ ಪಠಣ ಆಶುಭಾಷಣ ತೃತಿಯ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.