HomePage_Banner
HomePage_Banner
HomePage_Banner

ಹರಿಹರ ಪಲ್ಲತಡ್ಕ : ದಶಮಾನೋತ್ಸವದ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತಡ್ಕ ಇದರ ದಶಮಾನೋತ್ಸವ ವರ್ಷದ ಶ್ರೀ ಗಣೇಶೋತ್ಸವ ಸೆ.೧ ರಿಂದ ಸೆ.೩ ರವರೆಗೆ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸೆ.೧ ರಂದು ಬೆಳಗ್ಗೆ ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.

ಬಳಿಕ ಗೌರಿ ಪೂಜೆ ನಡೆದು, ಹರಿಹರ ಪಲ್ಲತಡ್ಕ, ಬಾಳುಗೋಡು, ಐನೆಕಿದು ಗ್ರಾಮಗಳಿಗೆ ಸೀಮಿತವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಸಂಜೆ ಭಜನಾ ಕಾರ್ಯ ನಡೆದಿದ್ದು ರಾತ್ರಿ ಬೊಳ್ಳಿ ಬೊಲ್ಪು ಕಲಾವಿದರು ಪುತ್ತೂರು ಇವರಿಂದ ” ನನ ಮರ್ಲ್ ಕಟ್ಟೊಡ್ಚಿ” ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.

ಇಂದು ಬೆಳಗ್ಗೆ ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆದಿದ್ದು ಸಂಜೆ ಭಜನಾ ಕಾರ್ಯಕ್ರಮ ನಡೆದು ರಾತ್ರಿ ಹರಿಹರ ಪಲ್ಲತಡ್ಕ, ಬಾಳುಗೋಡು, ಐನೆಕಿದು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ರಸ ಸಂಜೆ ನಡೆಯಲಿದೆ. ಬಳಿಕ ಕುಮಾರಸ್ವಾಮಿ ವಿದ್ಯಾಲಯದ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.