HomePage_Banner
HomePage_Banner
Breaking News

ನೀರು ಪಾಲಾದ ಕುದ್ವ ಶೇಷಪ್ಪ ಗೌಡರ ಪತ್ತೆಗೆ ಪಂಜದಲ್ಲಿ ಹುಡುಕಾಟ

ಪಂಜದ ಕುದ್ವ ಎಂಬಲ್ಲಿ ನೀರುಪಾಲಾದ ಕುದ್ವ ಶೇಷಪ್ಪ ಗೌಡ ಅವರ ಪತ್ತೆಗೆ ಪಂಜದಲ್ಲಿ ಹುಡುಕಾಟದ ಕಾರ್ಯಾಚರಣೆ ನಡೆಯುತ್ತಿದೆ.
ಕೂತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡರು ನಿನ್ನೆಯಿಂದ ನಾಪತ್ತೆಯಾಗಿದ್ದರು.

ಬೆಳಿಗ್ಗೆ ತೋಟದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ಅವರು ಬಳಿಕ ಮಧ್ಯಾಹ್ನ ಜ್ವರಕ್ಕೆ ಔಷಧಿ ತರಲು ಹೋಗುವುದಾಗಿ ಪಂಜ ಪೇಟೆಯ ಕಡೆಗೆ ಹೊರಟಿದ್ದರು.

ಆ ಬಳಿಕ ಮನೆಗೆ ಬಾರದ ಹಿನ್ನಲೆಯಲ್ಲಿ ಪಂಜ ಸಂಪರ್ಕಿಸುವ ಕಾಲುದಾರಿಯಲ್ಲಿ ಹುಡುಕುತ್ತಾ ಹೋದಾಗ ತೋಟದ ಬಳಿಯ ತೋಡಿನ ಕಾಲುಸಂಕದ ಮೇಲೆ ಅಳವಡಿಸಲಾದ ಅಡ್ಡಕಂಬ ತುಂಡಾಗಿತ್ತು. ಇದರಿಂದ ಸಂಶಯಗೊಂಡು ಅಲ್ಲಿನ ಸಮೀಪದ ನಿವಾಸಿಗಳೊಂದಿಗೆ ಹುಡುಕಾಟ ನಡೆಸಿದಾಗ ಅವರ ಒಂದು ಚಪ್ಪಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ಕಂದಾಯ ಇಲಾಖೆಯವರು ಮತ್ತು ಪೊಲೀಸರು ಗೃಹರಕ್ಷಕ ದಳದ ಸಹಾಯದೊಂದಿಗೆ ರಾತ್ರಿಯೇ ಹುಡುಕಾಟದ ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ ಅಲ್ಲಿ ನೀರಿಗೆ ಬಿದ್ದರೆ ಹೊಳೆ ಸೇರುವ ಸಂಭವವಿದ್ದುದರಿಂದ ಇಂದು ಬೆಳಿಗ್ಗಿನಿಂದಲೇ ಶೇಷಪ್ಪ ಗೌಡರ ಪತ್ತೆಗೆ ಕಾರ್ಯಾಚರಣೆ ಆರಂಭಗೊಂಡಿದೆ.

ಈ ತೋಡು ನಾಗತೀರ್ಥ ಹೊಳೆಯನ್ನು ಸಂಪರ್ಕಿಸಿ ಅಲ್ಲಿಂದ ಪಂಜ ಹೊಳೆಗೆ ಸೇರುವ ಹಿನ್ನಲೆಯಲ್ಲಿ ಈಗ ಪಲ್ಲೋಡಿ ಬಳಿ ಇರುವ ಪಂಜ ಸೇತುವೆ ಬಳಿ ಹುಡುಕಾಟ ನಡೆಸಲಾಗುತ್ತಿದೆ.


ತಹಶೀಲ್ದಾರ್ ನಿರ್ದೇಶನದ ಮೇರೆಗೆ ಪಂಜ ಆರ್‌ಐ ಶಂಕರ್ ಎಂ.ಎ. ಮತ್ತು ಸಿಬ್ಬಂದಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸದಸ್ಯರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಕೂಡಾ ಸ್ಥಳದಲ್ಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.