HomePage_Banner
HomePage_Banner

ಎಣ್ಮೂರು ಗ್ರಾ.ಪಂ. ಸಿಬ್ಬಂದಿ ಮೋಹನ ಆತ್ಮಹತ್ಯೆ

ಮೂರು ತಿಂಗಳ ಹಿಂದೆ ಅಮಾನತುಗೊಂಡಿದ್ದ ಸಿಬ್ಬಂದಿ
ಊರವರಿಂದ ಪ್ರತಿಭಟನೆಗೆ ಸಿದ್ಧತೆ

ಎಣ್ಮೂರು ಗ್ರಾ.ಪಂ.ನ ಅಮಾನತುಗೊಂಡ ನೌಕರ ಮೋಹನ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಗಿ ತಿಳಿದುಬಂದಿದೆ. ಇತ್ತೀಚೆಗೆ ಗ್ರಾ.ಪಂ.ನಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿ ಪಂಚಾಯತ್ ಆಡಳಿತ ಮಂಡಳಿಯು ಇಬ್ಬರು ನೌಕರನ್ನು ಅಮಾನತು ಮಾಡಿತ್ತು. ಅವರಲ್ಲಿ ಮೋಹನರವರು ಸೇರಿದ್ದರು. ಕೆಲಸದಿಂದ ಅಮಾನತುಗೊಂಡಿರುವುದರಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಹಿನ್ನಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

ನಿನ್ನೆ ರಾತ್ರಿ ಮನೆಯಲ್ಲಿದ್ದ ಅವರು ವಿಷ ಸೇವಿಸಿದರೆನ್ನಲಾಗಿದೆ. ಈ ವಿಚಾರ ತಿಳಿದು ಮನೆಯವರು ಮತ್ತು ಸ್ಥಳೀಯರು ಅವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಇಂದು ಬೆಳಿಗ್ಗೆ ಮೃತದೇಹವನ್ನು ಅವರ ಮನೆಗೆ ತರಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ತಪ್ಪಿದ್ದಲ್ಲಿ ಮೃತದೇಹವನ್ನು ಪಂಚಾಯತ್ ಮುಂದೆ ಇಟ್ಟು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.