HomePage_Banner
HomePage_Banner
HomePage_Banner

ನೆಟ್ಟಾರು ಪುಳಿಂಕೊಟೆ ಗದ್ದೆಯಲ್ಲಿ ಕೆಸರ್ಡ್ ಬಿರುವೆರ್ ಗೊಬ್ಬುಲು ಕ್ರೀಡಾಕೂಟ

 

ಬಿಲ್ಲವ ಯುವ ಶಕ್ತಿ ಒಂದಾದರೆ ಸಮಾಜದಲ್ಲಿ ಬಿಲ್ಲವ ಸಮುದಾಯ ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲಿ ಮುಂದೆ ಬರುತ್ತದೆ. ವಾಹಿನಿಯಂತಹ ಸಂಘಟನೆ ಮೂಲಕ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಒಂದು ವೇದಿಕೆ ಸಿಕ್ಕಿದಂತಾಗಿದೆ. ಈ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಲ್ಲವ ಸಂಘದ ಸುಳ್ಯ ಇದರ ಅಧ್ಯಕ್ಷ ಎನ್.ಎಸ್.ಡಿ ವಿಠಲ್ ದಾಸ್ ಅಭಿಪ್ರಾಯಪಟ್ಟರು.
ಯುವ ವಾಹನಿ ಸುಳ್ಯ ಘಟಕದ ವತಿಯಿಂದ ನೆಟ್ಟಾರು ಪುಳಿಂ ಕೋಟೆ ಗದ್ದೆಯಲ್ಲಿ ನಡೆದ ಯುವ ವಾಹಿನಿ ಸುಳ್ಯ ಘಟಕದ ಕೆಸರ್ಡ್ ಬಿರುವೆರ್ ಗೊಬ್ಬುಲು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಶೀನಪ್ಪ ಪೂಜಾರಿ ಕುತ್ಯಾಡಿ ಗದ್ದೆಗೆ ಕಾಯಿ ಒಡೆಯುವ ಮೂಲಕ ಮುಹೂರ್ತ ನಿರ್ವಹಿಸಿದರು. ಮುಖ್ಯ ಅತಿಥಿಯಾಗಿ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಶೇಣಿ ಗರಡಿಯ ಮೊಕ್ತೇಸರರಾದ ಧರ್ಮಪಾಲ ಶೇಣಿ, ಬಿಲ್ಲವ ಸಂಘ ಸುಳ್ಯದ ಕಾರ್ಯದರ್ಶಿ ಬಾಲಕೃಷ್ಣ ನೂಜಾಡಿ ಭಾಗವಹಿಸಿದ್ದರು. ಸುಳ್ಯ ಯುವ ವಾಹಿನಿ ಘಟಕದ ಅಧ್ಯಕ್ಷ ಪ್ರವೀಣ್ ನೆಟ್ಟಾರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಕೆ.ವಿ. ಕಾರ್ಯದರ್ಶಿ ಭರತ್ ಬೊಮ್ಮಾರು, ಘಟಕದ ಕ್ರೀಡಾ ನಿರ್ದೇಶಕರಾದ ಶಶಿಧರ ಪೂಜಾರಿ ಪರಿವಾರಕಾನ ಉಪಸ್ಥಿತರಿದ್ದರು. ಕು. ಕಾವ್ಯಶ್ರೀ ಪ್ರಾರ್ಥಿಸಿ, ಪ್ರವೀಣ್ ನೆಟ್ಟಾರು ಸ್ವಾಗತಿಸಿದರು. ಹರೀಶ್ ಬೆಳ್ಳಾರೆ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಝೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಇವರನ್ನು ಗೌರವಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ, ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಕೆಸರ್ಡ್ ಬಿರುವೆರೆ ಗೊಬ್ಬುಲು ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲು ಇದರ ಯಜಮಾನರಾದ ಶ್ರೀಧರ ಪೂಜಾರಿ, ಕಕ್ಕೆಪದವು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಧರ ಪೂಜಾರಿ ಸಾರಕೆರೆಯವರನ್ನು ಸನ್ಮಾನಿಸಲಾಯಿತು. ಸ್ಥಳದಾನಿ ಕೃಷಿಕರಾದ ಲೋಕೇಶ್ ಪೂಜಾರಿ ಕೆ.ಎಸ್. ಇವರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದೈಹಿಕ ಶಿಕ್ಷಕರಾಗಿ ಸಹಕರಿಸಿದ ಬಾಲಕೃಷ್ಣ ನೂಜಾಡಿ, ಪ್ರಶಾಂತ್ ಪೂಜಾರಿ, ಚಂದ್ರಶೇಖರ ಚಾವಡಿಬಾಗಿಲು, ಮಹೇಶ್ಚಂದ್ರ ಸಾಲಿಯಾನ್, ಶ್ರೀಧರ ಸಾಲ್ಯಾನ್, ಗಣೇಶ್ ಕೊಲ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ ಸುಳ್ಯ ಘಟಕದ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಹೈದಂಗೂರು, ಕಾರ್ಯದರ್ಶಿ ಭರತ್ ಬೊಮ್ಮಾರು, ಕ್ರೀಡಾ ನಿರ್ದೇಶಕರಾದ ಶಶಿಧರ ಪೂಜಾರಿ ಪರಿವಾರಕಾನ ಉಪಸ್ಥಿತರಿದ್ದರು. ಯುವ ವಾಹಿನಿ ಸುಳ್ಯ ಘಟಕದ ಅಧ್ಯಕ್ಷ ಕ್ರೀಡಾಕೂಟದ ರೂವಾರಿ ಪ್ರವೀಣ್ ನೆಟ್ಟಾರು ಸ್ವಾಗತಿಸಿದರು. ಶಿವಪ್ರಸಾದ್ ಕೆ.ವಿ. ವಿಜೇತರ ವಿವರ ತಿಳಿಸಿದರು. ಶಶಿಧರ ಕಿನ್ನಿಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.