HomePage_Banner
HomePage_Banner
Breaking News

ಹಿಲ್ ಸೈಡ್ ಬಾರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ – 3ಲಕ್ಷ ರೂ. ನಷ್ಟ

ಸುಳ್ಯದ ಹಿಲ್‌ಸೈಡ್ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹತ್ತಿಕೊಂಡು ಸುಮಾರು 3 ಲಕ್ಷ ರೂ ನಷ್ಟ ಸಂಭವಿಸಿರುವ ಘಟನೆ ಸೆ.6ರಂದು ವರದಿಯಾಗಿದೆ. ಬೆಳಗ್ಗೆ ಸುಮಾರು 6 ಗಂಟೆಗೆ ಸಿ.ಸಿ. ಕ್ಯಾಮರಾದ ಕಂಪ್ಯೂಟರ್ ಮಾನಿಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತೆನ್ನಲಾಗಿದೆ. ಒಮ್ಮಿಂದೊಮ್ಮೆಲೆ ಬೆಂಕಿ ಏರ ತೊಡಗಿ, ಎದುರಿನ ಕೌಂಟರ್, ಕ್ಯಾಬಿನ್‌ಗಳಿಗೂ ಬೆಂಕಿ ವ್ಯಾಪಿಸಿತು. ಇದನ್ನು ಗಮನಿಸಿ ಬಾರ್‌ನವರು ಹಾಗೂ ಸಿಬ್ಬಂದಿಗಳು ನೀರು ಸುರಿದು ಬೆಂಕಿ ನಂದಿಸಿರು. ಕಂಪ್ಯೂಟರ್ ಸಿಸ್ಟಮ್, ಕೌಂಟರ್, ಕ್ಯಾಬೀನ್, ಸುಮಾರು 140 ಲೀ ಮದ್ಯ ಸೇರಿದಂತೆ ಸುಮಾರು ೩ ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಾರ್‌ನವರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದು, ಅಬಕಾರಿ ನಿರೀಕ್ಷಕರಾದ ಮಹಾಲಿಂಗ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿರುವುದಾಗಿ ತಿಳಿದು ಬಂದಿದೆ. ಮೆಸ್ಕಾಂನವರು ಕೂಡಾ ಸ್ಥಳಕ್ಕೆ ಬಂದಿದ್ದರು. ಹೈವೋಲ್ಟೆಜ್‌ನಿಂದ ಈ ರೀತಿ ಆಗಿರಬೇಕೆಂದು ಶಂಕಿಸಲಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.