ಸುಳ್ಯ ನಾವೂರು ಕಾಲನಿಯಲ್ಲಿರುವ ಮಹಾಮ್ಮಾಯಿ ದೇವಸ್ಥಾನ ದಲ್ಲಿದ್ದ ಕಾಣಿಕೆ ಡಬ್ಬಿ ಕಳವಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ದೇವಸ್ಥಾನ ಸಮಿತಿಯವರು ಸುಳ್ಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸೆ.7 ರಂದು ರಾತ್ರಿ ಕಳವಾಗಿದ್ದು ಸೆ.8ರಂದು ಕಾಲನಿ ನಿವಾಸಿಗಳ ಗಮನಕ್ಕೆ ಬಂದಿತ್ತು. ಬಳಿಕ ಅವರು ಪೋಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.