HomePage_Banner
HomePage_Banner
HomePage_Banner

ಸೌಂದರ್ಯ ಸ್ಪರ್ಧೆಯಲ್ಲಿ ಪಾರಮ್ಯ ಮೆರೆದ ಸುಳ್ಯದ ಪ್ರತಿಭೆ : ದೀಪಿಕಾ ಅಡ್ತಲೆಗೆ ಮಿಸೆಸ್ ಕರ್ನಾಟಕ ಪ್ರಶಸ್ತಿ

 

ರಾಕಿಂಗ್ ರಾತು ಮೋಡೆಲ್ ಮೇನೇಜ್ ಮೆಂಟ್ ಮೈಸೂರು ಆಯೋಜಿಸಿದ ‘ಮಿಸೆಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಸುಳ್ಯದ ಶ್ರೀಮತಿ ದೀಪಿಕಾ ಅಡ್ತಲೆಯವರು ಪ್ರಶಸ್ತಿ ಗೆದ್ದುಕೊಂಡು ‘ಮಿಸೆಸ್ ಕರ್ನಾಟಕ’ ಆಗಿ ಮೂಡಿ ಬಂದಿದ್ದಾರೆ.

ಅರಂತೋಡಿನ ನಿವೃತ್ತ ಮುಖ್ಯೋಪಾಧ್ಯಾಯ ಜಯರಾಮ ಅಡ್ತಲೆ ಮತ್ತು ಶ್ರೀಮತಿ ಯಶೋದಾ ಅಡ್ತಲೆ ದಂಪತಿಯ ಪುತ್ರಿಯಾಗಿರುವ ದೀಪಿಕಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಪ್ರಸ್ತುತ ಬೆಂಗಳೂರಿನ ಕೆಪಿಎಂಜಿ ಕಂಪೆನಿಯಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಮೇನೇಜರ್ ಆಗಿದ್ದಾರೆ. ಪತಿ ದಯಾ ಗೌಡ ಮತ್ತು ಐದು ವರ್ಷದ ಪುತ್ರ ದಮನ್ ಗೌಡರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸಂಗೀತ ಹಾಗೂ ನೃತ್ಯ ಕ್ಷೇತ್ರದ ಪ್ರತಿಭೆಯಾಗಿರುವ ದೀಪಿಕಾ ಝೀ ಕನ್ನಡದಲ್ಲಿ ಪ್ರಸಾರವಾದ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟನೆಯನ್ನೂ ಮಾಡಿದ್ದಾರೆ. ಇದೀಗ ಚಿತ್ರರಂಗದಿಂದಲೂ ಆಫರ್ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.