HomePage_Banner
HomePage_Banner
HomePage_Banner

ಸೆ. 15 : ತೊಡಿಕಾನ ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವರ ಕ್ಷೇತ್ರ – ತೀರ್ಥ – ಪರಿಸರ ಸಂರಕ್ಷಣಾ ಸಮಿತಿಯ ಉದ್ಘಾಟನೆ

ತೊಡಿಕಾನ ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವರ ಕ್ಷೇತ್ರದ ಶ್ರದ್ಧಾ ಬಿಂದುಗಳಾದ ವಿವಿಧ ತೀರ್ಥಗಳು ಹಾಗೂ ದೇವಸ್ಥಾನದ ಪರಿಸರವನ್ನು ಸ್ವಚ್ಛ ಸುಂದರವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಪ್ರಮುಖವಾಗಿ ವಾರಣಾಸಿ ಗುಂಡಿಯ ಅಭಿವೃದ್ಧಿ ಕಾರ್ಯದ ಪ್ರಾರಂಭೋತ್ಸವವು ನಡೆಯಲಿರುವುದು. ಇದರ ಉದ್ಘಾಟನಾ ಸಮಾರಂಭವು ಸೆ.15  ರಂದು ಪೂರ್ವಾಹ್ನ ಗಂಟೆ 1೦.3೦ಕ್ಕೆ ಅಕ್ಷಯ ಸಭಾಭವನ ತೊಡಿಕಾನದಲ್ಲಿ ನಡೆಯಲಿದೆ.

ಸಮಿತಿಯ ಸಂಚಾಲಕ ಯು.ಎಂ. ಕಿಶೋರ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಸ್ ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಣಿಪಾಲ ಎಂ.ಐ.ಟಿ. ಪ್ರೊಫೆಸರ್ ಡಾ. ನಾರಾಯಣ ಶೇಣಿಯವರು ವಿಷಯ ಮಂಡನೆ ಮಾಡಲಿರುವರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಪ್ರಗತಿಪರ ಕೃಷಿಕ ರಾಜೇಂದ್ರ ಪ್ರಸಾದ್ ರವರು ಉಪಸ್ಥಿತರಿರುವರು ಎಂದು ಸಂಚಾಲಕ ಕಿಶೋರ್‌ಕುಮಾರ್ ಯು.ಎಂ.ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.