HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ದತ್ತು ಪಡೆದ ಉಬರಡ್ಕ ದೇವಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

87 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ ಅಭಿವೃದ್ಧಿ

ದೇವರ ಕೆಲಸ ಮಾಡುವ ಸೌಭಾಗ್ಯ ಬಂದಿದೆ : ನಿತ್ಯಾನಂದ ಮುಂಡೋಡಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ದತ್ತು ಪಡೆಯಲಾದ ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಇಂದು ಚಾಲನೆ ನೀಡಲಾಯಿತು.

ಅಭಿವೃದ್ಧಿ ಕಾರ್ಯದ ಶಿಲಾಫಲಕ ಅನಾವರಣಗೈದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ಮಾತನಾಡಿ, ಇದೊಂದು ದೇವರ ಕೆಲಸ. ನಮ್ಮ ಅಧಿಕಾರದ ಕಾಲದಲ್ಲಿ ಇದು ನಡೆದಿರುವುದು ಯೋಗ ಮತ್ತು ಭಾಗ್ಯ. ಗ್ರಾಮೀಣ ಪ್ರದೇಶಗಳ ದೇಗುಲಗಳ ಅಭಿವೃದ್ಧಿ ಅಷ್ಟು ಸುಲಭವಲ್ಲ. ಇಂತಹ ಹೊತ್ತಿನಲ್ಲಿ ಕುಕ್ಕೆ ದೇವಾಲಯದಿಂದ ಈ ಕಾರ್ಯ ನಡೆದಿದ್ದು, ನಮ್ಮ ಅಧಿಕಾರಾವಧಿ ಕೊನೆಗೊಂಡರೂ ಮುಂದೆ ಬರುವವರಿಂದ ಮತ್ತು ಅಧಿಕಾರಿಗಳಿಂದ ಇನ್ನಷ್ಟು ಅಭಿವೃದ್ಧಿಯನ್ನು ಊರವರು ಮಾಡಿಸಬೇಕು ಎಂದರು.


ಊರಿನ ಎಲ್ಲರೂ ಒಗ್ಗಟ್ಟಾಗಿ ಇಂದು ಭಾಗವಹಿಸಿರುವುದೇ ಮುಂಬರುವ ಯಶಸ್ಸಿನ ದ್ಯೋತಕ. ಉಬರಡ್ಕದ ಎಲ್ಲಾ ಫ್ರಂಟ್‌ಲೈನ್ ಲೀಡರ್‍ಸ್ ಭಾಗವಹಿಸಿರುವುದು ಖುಷಿ ಕೊಟ್ಟಿದೆ ಎಂದು ಮುಂಡೋಡಿ ಹೇಳಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳ ಮಾತನಾಡಿ, ಇದೊಂದು ಚಾರಿತ್ರಿಕ ಘಟನೆ. ಇಂತಹ ಯೋಜನೆಯನ್ನು ಮೊದಲು ಕಾರ್ಯಗತಗೊಳಿಸಿದ್ದು ನಮ್ಮ ದೇವಸ್ಥಾನ ಎಂಬ ಹೆಮ್ಮೆ ನಮಗಿದೆ. ನಿತ್ಯಾನಂದ ಮುಂಡೋಡಿ ನೇತೃತ್ವದ ಆಡಳಿತ ಮಂಡಳಿ 3 ವರ್ಷಗಳಲ್ಲಿ ಸಂಪೂರ್ಣ ರಾಜಕೀಯ ರಹಿತವಾಗಿ ಧಾರ್ಮಿ ಸೇವೆ ಮತ್ತು ಅಭಿವೃದ್ಧಿಯ ಕಾರ್ಯ ಮಾಡಿದೆ ಎಂದರು.


ಉಬರಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಮಲೆ, ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು, ಉಬರಡ್ಕ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಳ್ಳಡ್ಕ ರತ್ನಾಕರ ಗೌಡ, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮದುವೆಗದ್ದೆ ದಾಮೋದರ ಗೌಡ ಮಾತನಾಡಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ, ಇಂಜಿನಿಯರ್ ಉದಯಕುಮಾರ್, ಉಬರಡ್ಕ ದೇವಸ್ಥಾನದ ಮಾಜಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಮಡ್ತಿಲ, ಕಾಮಗಾರಿಯ ಗುತ್ತಿಗೆದಾರರಾದ ವಿಜಯಕುಮಾರ್, ಕಿರಣ್‌ಕುಮಾರ್ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್.ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.


87.32 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ
ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ನಾಲ್ಕು ಕಾಮಗಾರಿಗಳು ನಡೆಯಲಿದೆ. ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ನಿರ್ಮಾಣ, ಹೊರಾಂಗಣ ಮತ್ತು ಒಳಾಂಗಣ ರೂಫಿಂಗ್ ಕೆಲಸ, ಅರ್ಚಕರ ವಸತಿಗೃಹ ನಿರ್ಮಾಣ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣಗಳು ನಡೆಯಲಿವೆ. ರೂ. 87.32 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿವೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.