HomePage_Banner
HomePage_Banner

ಪುತ್ತೂರಿನ ಮನೆಯಲ್ಲಿ ವೇಶ್ಯಾವಾಟಿಕೆ- ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದ ಕಾರ್ಯಾಚರಣೆ-ಮಹಿಳೆಯ ರಕ್ಷಣೆ, ಸಂಪಾಜೆ ಯುವಕ ಸೇರಿ ಮೂವರ ಬಂಧನ

  ಪುತ್ತೂರಿನ ಅರಿಯಡ್ಕ ಗ್ರಾಮದ ಬಳ್ಳಿಕಾನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಲಾರಿ ಚಾಲಕನೋರ್ವ, ನಿರ್ವಾಹಕನೋರ್ವ ಹಾಗೂ ವೇಶ್ಯಾವಾಟಿಕೆ ನಡೆಸಲು ಮನೆಯಲ್ಲಿ ಅನುಮತಿ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನೊಂದ ಮಹಿಳೆಯನ್ನು ರಕ್ಷಿಸಲಾಗಿದೆ.

ಅರಿಯಡ್ಕ ಗ್ರಾಮದ ಬಳ್ಳಿಕಾನ ನಾರಾಯಣ ನಾಯ್ಕ ಎಂಬವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೆ.11ರಂದು ಕಾರ್ಯಾಚರಣೆ ನಡೆಸಿ ವೈಶಾವಾಟಿಕೆಯಲ್ಲಿ ತೊಡಗಿದ್ದ ಸುಳ್ಯ ಸಂಪಾಜೆಯ ಅರೆಕಳ ರೋಡ್ ಕೂಸಪ್ಪ

ನಾರಾಯಣ ನಾಯ್ಕ

ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕನಾಗಿರುವ ಚರಣ್(25ವ), ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ದಿ.ಬಾಬು ಪೂಜಾರಿ ಅವರ ಪುತ್ರ ಲಾರಿಯ ನಿರ್ವಾಹಕ ಅರುಣ್ ಕುಮಾರ್(38ವ) ಹಾಗೂ ವೇಶ್ಯಾವಾಟಿಕೆ

ಚರಣ್

ಅರುಣ್ ಕುಮಾರ್

ಮನೆಯಲ್ಲಿ ಅನುಮತಿ ನೀಡಿದ ಬಳ್ಳಿಕಾನ ನಿವಾಸಿ ನಾರಾಯಣ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ನೊಂದ ಮಹಿಳೆಯನ್ನು ರಕ್ಷಿಸಲಾಗಿದೆ. ತಾನು ಹೋಮ್ ಪ್ರೋಡಕ್ಟ್ ಸಾಮಾಗ್ರಿಗಳ ಲೈನ್ ಸೇಲ್ ಮಾಡುತ್ತಿದ್ದು ತನ್ನನ್ನು ಚರಣ್ ಮತ್ತು ಅರುಣ್ ಕುಮಾರ್ ಪುಸಲಾಯಿಸಿ ಕರೆದಿರುವುದಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಮತ್ತು ನೊಂದ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನೊಂದ ಮಹಿಳೆಗೆ ಮಂಗಳೂರು ಪ್ರಜ್ಞಾ ಮಹಿಳಾ ಘಟಕಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.