ದುಗಲಡ್ಕ: ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle

ಸುಳ್ಯ ಕಸಬಾ ಗ್ರಾಮದ ದುಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಸೆ.12ರಂದು ನಡೆಯಿತು. ಬಾಲವಿಕಾಸ ಸಮಿತಿಯ ಶ್ರೀಮತಿ ನಯನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ, ಸುಳ್ಯ ವಲಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾ, ನಗರ ಪಂಚಾಯಿತಿ ಸದಸ್ಯೆ ಶಶಿಕಲಾ, ದುಗಲಡ್ಕ ಪ್ರೌಢಶಾಲೆ ಮುಖ್ಯ ಗುರು ಸುಬ್ರಹ್ಮಣ್ಯ, ಕಿರಿಯ ಆರೋಗ್ಯ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮ ಮಕ್ಕಳ ನಾಡಗೀತೆಯಲ್ಲಿ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶಶಿಕಲಾ ನೆರವೇರಿಸಿದರು.  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈ ಕಾರ್ಯಕ್ರಮದ ಹಿನ್ನೆಲೆಯ ಬಗ್ಗೆ ಪೌಷ್ಟಿಕಾಂಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಮೇಲ್ವಿಚಾರಕಿಯರು ಇಲಾಖೆಯ ಯೋಜನೆಗಳು ಮತ್ತು ಈ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ೩ ತಾಯಂದಿರು ಪೌಷ್ಟಿಕ ಪ್ರಾತ್ಯಕ್ಷತೆಯನ್ನು ಮಾಡಿದರು. 22ತಾಯಂದಿರು ಹಾಗೂ ಶ್ರೀ ಶಕ್ತಿ ಸದಸ್ಯರು ಪೌಷ್ಟಿಕ ಆಹಾರ ತಯಾರಿಸಿ
ಪ್ರಶಂಸೆಗೆ ಪಾತ್ರರಾದರು. ಇವರೆಲ್ಲರಿಗೂ ಶ್ರೀ ದುಗ್ಗಾಲಯ ದೈವಸ್ಥಾನದ ಉಪಾಧ್ಯಕ್ಷ ಯತೀಶ್ ರೈ ಹಾಗೂ ಆರೋಗ್ಯ ಇಲಾಖೆಯಿಂದ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
2019 ನೇ ಸಾಲಿನಲ್ಲಿ ಅಂಗನವಾಡಿಯಿಂದ ಶಾಲೆಗೆ ಸೇರಿದ 6 ಮಕ್ಕಳು ಹಾಗೂ 1 ಮಗುವಿನ ಹುಟ್ಟುಹಬ್ಬದ ಸಲುವಾಗಿ  ಕೇಂದ್ರಕ್ಕೆ ನೀರಿನ ಟ್ಯಾಂಕನ್ನು ಒದಗಿಸಿದರು. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮ ನಿರೂಪಣೆ,  ಸ್ವಾಗತ ಹಾಗೂ ಧನ್ಯವಾದವನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ
ನೆರವೇರಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಶಾರದ ಹಾಗೂ ಮಕ್ಕಳ ತಾಯಂದಿರು, ಬಾಲವಿಕಾಸ ಸಮಿತಿ ಸದಸ್ಯರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.