ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 12, 13 ರಂದು ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿ ಜನನಿ ಮುಂಡೋಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ವಿಜ್ ವಿಭಾಗದಲ್ಲಿ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಗುತ್ತಿಗಾರು ಗ್ರಾಮದ ಪುರುಷೊತ್ತಮ ಮುಂಡೋಡಿ ಮತ್ತು ಶ್ರೀಮತಿ ಭುವನೇಶ್ವರಿ ದಂಪತಿಯ ಪುತ್ರಿ.